ಅಂತಾರಾಷ್ಟ್ರೀಯ ಮಹಿಳಾ ದಿನ: ಮಂಗಳೂರಿನಲ್ಲಿ ವಿಮೆನ್ಸ್ ಫ್ರಂಟ್ ನಿಂದ ಭಿತ್ತಿಪತ್ರ ಪ್ರದರ್ಶನ

Prasthutha|

ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಮಂಗಳೂರು ನಗರ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಮಂಗಳವಾರ  ನಗರದ ಕ್ಲಾಕ್ ಟವರ್ ಬಳಿ ಭಿತ್ತಿ ಪತ್ರ ಪ್ರದರ್ಶಿಸಿ ಗಮನ ಸೆಳೆದರು.

- Advertisement -

“ಮಹಿಳಾ ಸುರಕ್ಷತೆ ಕೇವಲ ಘೋಷಣೆಯಲ್ಲ, ಅದು ಘನತೆಯ ಹಕ್ಕು”, ಬೇಟಿ ಬಚಾವೋ ಬೇಟಿ ಪಡಾವೊ: ಕೇವಲ ಘೋಷಣೆ ಸಾಲಲ್ಲ, ಅರ್ಥಪೂರ್ಣ ಅನುಷ್ಠಾನಗೊಳ್ಳಲಿ ಮುಂತಾದ ಘೋಷಣೆಗಳ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಯಿತು.

ಸಂಘಟನೆಯ ಜಿಲ್ಲಾ ಮುಖಂಡೆ ಮುಜಾಹಿದಾ ಕಣ್ಣೂರು ಮಾತನಾಡಿ, ಜಗತ್ತಿನ ಎಲ್ಲಾ ಮಹಿಳೆಯರಿಗೆ ಯಾವುದೇ ಜಾತಿ, ಧರ್ಮ, ವರ್ಗ, ಲಿಂಗ ತಾರತಮ್ಯವಿಲ್ಲದೆ ಸಮಾನ ಹಕ್ಕು, ಸಮಾನ ಸ್ವಾತಂತ್ರ್ಯವನ್ನು, ಘನತೆಯಿಂದ ಬದುಕುವ ಹಕ್ಕುಗಳನ್ನು ಸಿಗುವ ವಾತಾವರಣವನ್ನು ನಿರ್ಮಿಸಬೇಕು ಎಂದು ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಒತ್ತಾಯಿಸುತ್ತಿದ್ದೇವೆ.

- Advertisement -

ಮಹಿಳೆಯರ ಮೇಲಾಗುತ್ತಿರುವ ದಬ್ಬಾಳಿಕೆ, ಶೋಷಣೆಯ ವಿರುದ್ಧ ನಾವೆಲ್ಲಾ ಹೋರಾಟ ನಡೆಸಬೇಕಾಗಿದೆ. ಘನತೆಯಿಂದ ಬದುಕುವ ಸಂವಿಧಾನ ಬದ್ಧ ಹಕ್ಕಿಗಾಗಿ ಇಂದು ಧ್ವನಿ ಎತ್ತಬೇಕಾಗಿದೆ. ನ್ಯಾಷನಲ್ ವಿಮೆನ್ಸ್ ಫ್ರಂಟ್ ಇಂದು ಎಲ್ಲಾ ಸಂತ್ರಸ್ತ, ಶೋಷಿತ ಮಹಿಳೆಯರ ಪರವಾಗಿ ಹೋರಾಡುವ ಸಂಕಲ್ಪ ತೊಡಬೇಕಾಗಿದೆ ಎಂದು ಹೇಳಿದರು.

ನ್ಯಾಷನಲ್ ವಿಮೆನ್ಸ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷೆ ಶಬ್ರೀನಾ, ಕಾರ್ಯದರ್ಶಿ ಶಹನಾಝ್, ಮುಖಂಡರಾದ ಸಕೀನಾ ಮಲಾರ್, ತಸ್ರೀನಾ, ತಸ್ಲೀನಾ ಬಿ.ಎಂ., ರಮ್ಲತ್, ನಸೀಮಾ, ಮೈಮೂನಾ ಮತ್ತಿತರರು ಉಪಸ್ಥಿತರಿದ್ದರು.



Join Whatsapp