ಓಂ ಚಿಹ್ನೆಯ ನಾಣ್ಯ ಈಸ್ಟ್ ಇಂಡಿಯಾ ಕಂಪನಿಯದ್ದೆಂದು ಸುಳ್ಳು ಹಬ್ಬಿಸುತ್ತಿರುವ ಪೋಸ್ಟ್ ಕಾರ್ಡ್: ವಿಕ್ರಮನ ಸುಳ್ಳು ಸುದ್ದಿಯ ನೈಜತೆ ಇಲ್ಲಿದೆ ನೋಡಿ

Prasthutha|

ಬೆಂಗಳೂರು: ಈಸ್ಟ್ ಇಂಡಿಯಾ ಕಂಪನಿಯ ಹಳೆಯ ತಾಮ್ರದ ನಾಣ್ಯದ ಮೇಲೆ ಓಂ ಎಂದು ಎಂದು ಬರೆದಿರುವ ಚಿತ್ರವೊಂದು ಮಹೇಶ್ ವಿಕ್ರಂ ಹೆಗ್ಡೆ ಸಾರಥ್ಯದ ಪೋಸ್ಟ್ ಕಾರ್ಡ್ ಫೇಸ್ಬುಕ್ ಪೇಜಿನಲ್ಲಿ ವೈರಲ್ ಆಗುತ್ತಿದ್ದು ಇದು ಸುಳ್ಳು ಮಾಹಿತಿ ಎಂದು ದೃಡಪಟ್ಟಿದೆ

- Advertisement -

‘coinquest.com’ ವೆಬ್ ಸೈಟ್  ಮೂಲಕ ಅನ್ವೇಷಿಸಿದಾಗ ಹಿಂದೂ ದೇವತೆ ಮತ್ತು ಓಂ ಚಿಹ್ನೆಯ ಎಂಬ ಈ ನಾಣ್ಯಗಳನ್ನು ಈಸ್ಟ್ ಇಂಡಿಯಾ ಕಂಪನಿಯು ಬಿಡುಗಡೆ ಮಾಡಿಲ್ಲ ಎಂದು ತಿಳಿದು ಬಂದಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ವೆಬ್ಸೈಟ್ನಲ್ಲಿ ಲಭ್ಯವಿರುವ ನಾಣ್ಯಗಳ ಇತಿಹಾಸವನ್ನು ಮತ್ತು ವಾಸ್ತವವಾಗಿ ಕಾನೂನುಬದ್ಧ ಟೆಂಡರ್ ಆಗಿರುವ ಎಲ್ಲಾ ನಾಣ್ಯಗಳನ್ನು  ಪರಿಶೀಲಿಸಿದಾಗ ಈ ನಾಣ್ಯಗಳನ್ನು ಸೇರಿಸಲಾಗಿಲ್ಲ ಎಂದು ತಿಳಿದು ಬಂದಿದೆ

- Advertisement -

ಈ ನಾಣ್ಯಗಳು ಆರ್ ಬಿಐ ದಾಖಲೆಗಳಲ್ಲಿಲ್ಲದ ಕಾರಣ ಪೋಸ್ಟ್ ಕಾರ್ಡ್ ಪೇಜ್ ತನ್ನ ಪೇಜಿನಲ್ಲಿ ಹಂಚುತ್ತಿರುವ ಈ ಚಿತ್ರ ಕಾಲ್ಪನಿಕ ಸೃಷ್ಟಿಗಳನ್ನು ಮಾತ್ರ ಪ್ರತಿನಿಧಿಸುತ್ತಿದ್ದು ಸತ್ಯಕ್ಕೆ ದೂರವಾದದ್ದು ಎಂಬುವುದು ಸ್ಪಷ್ಟವಾಗಿದೆ



Join Whatsapp