ಮುಂಬೈ: ಸಾರ್ವಜನಿಕ ಸಮಾರಂಭವೊಂದರಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಯೋಗ ಗುರು ಬಾಬಾ ರಾಮ್‌ದೇವ್ ಅವರು ಕ್ಷಮೆಯಾಚಿಸಿದ್ದಾರೆ
ಮಹಾರಾಷ್ಟ್ರ ಮಹಿಳಾ ಆಯೋಗ ರಾಮ್‌ದೇವ್ ಅವರಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿತ್ತು. ‘ನೋಟಿಸ್‌ಗೆ ಪತ್ರಿಕ್ರಿಯಿಸಿರುವ ಬಾಬಾ ರಾಮ್‌ದೇವ್ ಅವರು ಕ್ಷಮೆ ಕೇಳಿದ್ದಾರೆ’ ಎಂದು ಆಯೋಗದ ಮುಖ್ಯಸ್ಥೆ ರೂಪಾಲಿ ಚಕಣಕರ್ ಹೇಳಿದ್ದಾರೆ.
ಮಹಿಳೆಯರು ಸೀರೆ ಉಟ್ಟರೆ ಸುಂದರ, ಸಲ್ವಾರ್ ಕಮೀಜ್ ಧರಿಸಿದರೆ ಅತಿ ಸುಂದರ, ಬಟ್ಟೆಯನ್ನೇ ಧರಿಸದಿದ್ದರೆ ಇನ್ನೂ ಅಂದವಾಗಿ ಕಾಣಿಸುತ್ತಾರೆ ಎಂದು ಯೋಗ ಗುರು ಬಾಬಾ ರಾಮದೇವ್ ವೇದಿಕೆಯೊಂದರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯ ಪತ್ನಿಯ ಮುಂದೆ ಹೇಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ದೆಹಲಿ ಮಹಿಳಾ ಆಯೋಗ, ಮಹಿಳಾ ಪರ ಹೋರಾಟಗಾರರು, ಹಲವು ರಾಜಕಾರಣಿಗಳು ಬಾಬಾ ರಾಮ್‌ದೇವ್ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.