ನಟಿ ಸಂಜನಾಗೆ ಅಶ್ಲೀಲ ಮೆಸೇಜ್: ಆ್ಯಡಂ ಬಿದ್ದಪ್ಪ ಬಂಧನ

Prasthutha|

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಸಂದೇಶಗಳನ್ನು ಕಳುಹಿಸಿದ ಆ್ಯಡಂ ಬಿದ್ದಪ್ಪ ಅವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ಖ್ಯಾತ ಫ್ಯಾಷನ್ ಡಿಸೈನರ್, ಕೋರಿಯೋಗ್ರಾಫರ್ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಅವರನ್ನು  ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ

ನಟಿ ಸಂಜನಾ ಗಲ್ರಾಣಿ ಹಾಗೂ ಆ್ಯಡಂ ಸ್ನೇಹಿತರಾಗಿದ್ದು ಕೆಲ ದಿನಗಳ ಹಿಂದೆ ಸಂಜನಾಗೆ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದು ಈ ಸಂಬಂಧಿಸಿದಂತೆ ಸಂಜನಾ ನೀಡಿದ ದೂರಿನ ಮೇಲೆ ಇಂದಿರಾ ನಗರ ಪೊಲೀಸರು ಆ್ಯಡಂ ಬಿದ್ದಪ್ಪನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

- Advertisement -

ವಿಚಾರಣೆಯಲ್ಲಿ ತಮ್ಮ ಮೇಲಿನ ಆರೋಪವನ್ನು ಆಡ್ಯಂ ಬಿದ್ದಪ್ಪ ಒಪ್ಪಿಕೊಂಡಿಲ್ಲ. ಅಲ್ಲದೇ ಸಂಜನಾ ಗಲ್ರಾನಿ ನಡುವಿನ ವಾಟ್ಸಪ್ ಸಂದೇಶಗಳನ್ನು ಆ್ಯಡಂ ಡಿಲೀಟ್ ಮಾಡಿದ್ದಾರೆ ಎಂಬುದು ಗೊತ್ತಾಗಿದೆ.

ಕಳೆದ ಫೆಬ್ರವರಿ 25ರಂದು ರಾತ್ರಿ 10ರಿಂದ 12 ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಟಿ ಸಂಜನಾ ದೂರು ನೀಡಿದ್ದರು. ದೂರಿನ ಜೊತೆಗೆ ವಾಟ್ಸಪ್ ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಕೊಡಗಿನಲ್ಲಿರುವ ತನ್ನ ಹೋಮ್ ಸ್ಟೇನಲ್ಲಿ ಇದ್ದ ಆ್ಯಡಂ ಬಿದ್ದಪ್ಪನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತಾವು ಮೆಸೇಜ್ ಕಳಿಸಿಲ್ಲ ಎಂದು ಆ್ಯಡಂ ಬಿದ್ದಪ್ಪ ಹೇಳಿದ್ದಾರೆ. ಅಲ್ಲದೇ ಸಂಜನಾ ಗಲ್ರಾನಿ ಅವರ ನಂಬರ್ ಬ್ಲಾಕ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ನಟಿ ನೀಡಿದ ದಾಖಲೆಗಳನ್ನು ಇಟ್ಟುಕೊಂಡು ವಿಚಾರಣೆ ಮಾಡಲಾಗುತ್ತಿದೆ. ಆ್ಯಡಂ ಬಿದ್ದಪ್ಪ ತನ್ನ ಮೊಬೈಲ್ ನಲ್ಲಿ ಇರುವ ಚಾಟಿಂಗ್ ಡಿಲೀಟ್ ಮಾಡಿರುವುದರಿಂದ ಅವರ ಮೊಬೈಲ್ ಅನ್ನು ಪೊಲೀಸರು ರಿಟ್ರೀವ್ ಗೆ ಕಳುಹಿಸಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp