ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲ, ಅವಹೇಳನಕಾರಿ ಹೇಳಿಕೆ: ಕ್ಲಬ್ ಹೌಸ್ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚನೆ

Prasthutha|


ಹೊಸದಿಲ್ಲಿ: ಕ್ಲಬ್ ಹೌಸ್ ಎಂಬ ಆಡಿಯೋ ಚಾಟ್ ಆ್ಯಪ್ ನಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ನಗರದ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಡಿಸಿಡಬ್ಲ್ಯು ದೆಹಲಿ ಪೊಲೀಸರ ಸೈಬರ್ ಕ್ರೈಮ್ ವಿಭಾಗಕ್ಕೆ “ಹಿಂದೂ ಹೆಣ್ಣು ಮಕ್ಕಳಿಗಿಂತ ಮುಸ್ಲಿಂ ಹೆಣ್ಣು ಮಕ್ಕಳು ಹೆಚ್ಚು ಸುಂದರ” ಎಂಬ ವಿಷಯದ ಕುರಿತು ಅಸಹ್ಯ ಮತ್ತು ಅಶ್ಲೀಲ ಸಂಭಾಷಣೆಯಲ್ಲಿ ಭಾಗವಹಿಸಿದವರ ವಿರುದ್ಧ ಎಫ್ ಐಆರ್ ದಾಖಲಿಸಲು ಸೂಚಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಆರೋಪಿಗಳನ್ನು ತಕ್ಷಣವೇ ಬಂಧಿಸಿ 5 ದಿನಗಳೊಳಗೆ ವಿವರವಾದ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಆಯೋಗವು ದೆಹಲಿ ಪೊಲೀಸರಿಗೆ ಆದೇಶಿಸಿದೆ.
ಇದು ಕಳೆದ ಬಾರಿ ಗದ್ದಲವೆಬ್ಬಿಸಿದ ಬುಲ್ಲಿ ಬಾಯಿ ಮತ್ತು ಸುಲ್ಲೀ ಡೀಲ್ ಗಳಂತೆಯೇ ಆಗಿದ್ದು, ಇದರಲ್ಲಿ ಪತ್ರಕರ್ತರು, ವಕೀಲರು ಮತ್ತು ಕಾರ್ಯಕರ್ತರು ಸೇರಿದಂತೆ ಪ್ರಮುಖ ಮುಸ್ಲಿಂ ಮಹಿಳೆಯರನ್ನು ಆನ್ ಲೈನ್ ನಲ್ಲಿ “ಹರಾಜಿಗೆ” ಗುರಿಪಡಿಸಲಾಗಿತ್ತು
ಕ್ಲಬ್ ಹೌಸ್ ಚಾಟ್ ನ ಆಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.



Join Whatsapp