ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ ಜನಾರೋಗ್ಯವೇ ರಾಷ್ಟ್ರ ಶಕ್ತಿ ಕಾರ್ಯಕ್ರಮ

Prasthutha|

ಶಿವಮೊಗ್ಗ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿಯ ವತಿಯಿಂದ ಭದ್ರಾವತಿ ಯಲ್ಲಿ ಜನಾರೋಗ್ಯವೇ ರಾಷ್ಟ್ರ ಶಕ್ತಿ ( Healthy People Healthy Nation) ಕಾರ್ಯಕ್ರಮ ನಡೆಯಿತು

- Advertisement -

ಕಾರ್ಯಕ್ರಮವನ್ನು ಚೌಕ್ ಮಸೀದಿ ಹತಿರದಿಂದ ಅನ್ವರ್ ಕಾಲೋನಿಯ ವರಗೆ ಮ್ಯಾರಥಾನ್ ಓಟದ ಮೂಲಕ ಚಾಲನೆ ನೀಡಿ ಮಾರ್ಷಲ್ ಆರ್ಟ್ಸ್ ಡೆಮೋ, ಯೋಗಾ ಡೆಮೋ,ವ್ಯಾಯಾಮ ಮತ್ತು ದೇಹದಾರ್ಢ್ಯ ಪ್ರದರ್ಶನ ಮಾಡಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಿಎಫ್ ಐ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಸೈಯದ್ ರಿಜ್ವಾನ್,ಜಿಲ್ಲಾ ನಾಯಕರಾದ ಶಾಹಿದ್ ಖಾನ್,ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ಸಾದಿಕ್ ಉಲ್ಲಾ,ಉಬೇದುಲ್ಲಾ ಶರೀಫ್, ರಾಷ್ಟ್ರೀಯ ಖೋ -ಖೋ ಆಟಗಾರರಾದ ಮುನೀರ್ ಬಾಷಾ,ರಾಷ್ಟ್ರೀಯ ದೇಹದಾರ್ಢ್ಯ ಪಟು ಶೌಕತ್ ಅಲಿ,ಹಾಗೂ ಅನೇಕ ಗಣ್ಯರು, ಕಾರ್ಯಕರ್ತರು ಸ್ಥಳೀಯರು ಹಾಜರಿದ್ದರು

Join Whatsapp