ಕಾಂಗ್ರೆಸ್ ಗೆ ರಾಜಕಾರಣವೇ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ

Prasthutha|

ಬೆಂಗಳೂರು:  ಕಾಂಗ್ರೆಸ್ ಗೆ  ಜನರ ಸಂಕಷ್ಟಕ್ಕಿಂತಲೂ ಯಾವಾಗಲೂ ರಾಜಕಾರಣವೇ ಮುಖ್ಯ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಉಕ್ರೇನ್ ನಲ್ಲಿ ನವೀನ್ ಮೃತ ಪಟ್ಟಿದ್ದಕ್ಕೆ ಬಿಜೆಪಿಯನ್ನು ಹೊಣೆ ಮಾಡಿರುವ ಕಾಂಗ್ರೆಸ್ ಪಕ್ಷದವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು,  ಯುದ್ಧದಲ್ಲಿ ಯಾರಾದರೂ ಮಾಡಿದರೆ ರಾಜಕಾರಣ ಮಾಡುತ್ತಾರೆ ಅಂದರೆ ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ  ಎಂದ ಮುಖ್ಯಮಂತ್ರಿಗಳು, ಹಿಂದೆ ಕೂಡ ಯುಪಿಎ ಸರ್ಕಾರ ಇದ್ದಾಗ ಯುದ್ಧ ನಡೆದಿದ್ದು, ಒಬ್ಬರನ್ನು ಕರೆ ತರಲು ಆಗಲಿಲ್ಲ. ದೊಡ್ಡ ಪ್ರಮಾಣದಲ್ಲಿ ತಮ್ಮ ದೇಶದ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ತಮ್ಮ ದೇಶಕ್ಕೆ ಮರಳಿ ಕರೆತಂದಿರುವುದು ಭಾರತ ಮಾತ್ರ. ನಾಲ್ಕು ಜನ ಮಂತ್ರಿಗಳು ಉಕ್ರೇನ್ ನಲ್ಲಿದ್ದಾರೆ. ರಾಯಭಾರ ಕಚೇರಿಗಳನ್ನು  ಬಳಪಡಿಸಲಾಗಿದೆ. ಸಂವಹನ ಇದೆ. ಇನ್ನು 26 ವಿಮಾನಗಳು ಮುಂದಿನ 72 ಇಲ್ಲಿಗೆ ಬರಲಿವೆ. ನಿರಂತರವಾಗಿ ಪ್ರಕ್ರಿಯೆ ನಡೆದಿದೆ ಎಂದರು.

Join Whatsapp