ಡಿ.25ರಂದು ರಾಜಕೀಯ ಭವಿಷ್ಯ: ಜಿ.ಜನಾರ್ದನ ರೆಡ್ಡಿ

Prasthutha|

ಮಸ್ಕಿ: ಹೊಸ ಪಕ್ಷ ಕಟ್ಟುತ್ತೇನೋ? ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೋ? ಗೊತ್ತಿಲ್ಲ. ಆದರೆ ಈ ಎಲ್ಲ ಪ್ರಶ್ನೆಗಳಿಗೂ ಡಿ.25ರಂದು ಉತ್ತರ ದೊರೆಯಲಿದೆ ಎಂದು ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಹೇಳಿದರು.

- Advertisement -


ಮಸ್ಕಿ ಪಟ್ಟಣದ ಎನ್‌ಎಂಸಿಸಿ ಘಟಕದಲ್ಲಿ ಆಯೋಜನೆ ಮಾಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಪಕ್ಷ, ವರಿಷ್ಠರು, ಬಿ.ಶ್ರೀರಾಮುಲು ಸೇರಿ ಯಾರ ಜತೆಗೂ ನನ್ನ ವೈಮನಸ್ಸು ಇಲ್ಲ. ಕೆಲವು ಕಾರಣಗಳಿಂದಾಗಿ ನಾನು ಸಕ್ರಿಯ ರಾಜಕಾರಣ ಮತ್ತು ಜನರೊಂದಿಗೆ ದೂರವಾಗಿದ್ದೆ. ಈಗ ಮತ್ತೆ ಜನರೊಂದಿಗೆ ಬೆರೆಯಲು ಕಾಲ ಕೂಡಿ ಬಂದಿದೆ ಎಂದರು.
ರಾಜಕಾರಣ ಮತ್ತು ಸಮಾಜದ ಜತೆ ಬೆರೆಯಲು ಬಳ್ಳಾರಿಯಲ್ಲಿ ಷರತ್ತುಗಳಿವೆ. ಹೀಗಾಗಿ ಸ್ವಂತ ಜಿಲ್ಲೆ ಬಳ್ಳಾರಿ ಬಿಟ್ಟು ನನಗೆ ಪ್ರೀತಿ ಎನಿಸಿದ ಕೊಪ್ಪಳ, ರಾಯಚೂರುಗಳಲ್ಲಿ ಸದ್ಯ ಓಡಾಡುತ್ತಿದ್ದೇನೆ. ಆತ್ಮೀಯರು, ರಾಜಕೀಯ ಮುಖಂಡರು, ಸ್ನೇಹಿತರನ್ನು ಭೇಟಿ ಮಾಡುತ್ತಿದ್ದೇನೆ. ಗಂಗಾವತಿಯಲ್ಲಿ ಈಗಾಗಲೇ ಮನೆ ಮಾಡಿಕೊಂಡಿದ್ದೇನೆ. ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಆದರೆ ಪಕ್ಷೇತರ, ಸ್ವಂತ ಪಕ್ಷವೇ ಅಥವಾ ಇನ್ನೊಂದು ಪಕ್ಷವೇ ಎನ್ನುವ ಕುರಿತು ಇನ್ನು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಡಿ.25ರಂದು ಕೆಲ ಮಹನೀಯರ ಜಯಂತಿ ಇದ್ದು, ಇದೇ ಹೊಸ ಸಂಕಲ್ಪದೊಂದಿಗೆ ಮತ್ತೊಮ್ಮೆ ರಾಜಕೀಯವಾಗಿ ಸಕ್ರಿಯ ಜೀವನ ಆರಂಭಿಸುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.



Join Whatsapp