ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರಿಗೆ ಕಾಲಿನಿಂದ ಒದ್ದ ಪೊಲೀಸ್: ವೀಡಿಯೋ ವೈರಲ್

Prasthutha|

ನವದೆಹಲಿ: ಇಂದರ್ ಲೋಕ್ ಪ್ರದೇಶದ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಜನರಿಗೆ ಕಾನ್ ಸ್ಟೇಬಲ್ ಒಬ್ಬರು ಥಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆಯ ಕುರಿತು ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

“ಈ ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ವಿಭಾಗದ ಡಿಸಿಪಿ ಎಂ.ಕೆ.ಮೀನಾ ತಿಳಿಸಿದ್ದಾರೆ.

ವೀಡಿಯೋದಲ್ಲಿ ಗುಂಪೊಂದು ರಸ್ತೆಯಲ್ಲಿ ನಮಾಝ್ ಸಲ್ಲಿಸುತ್ತಿರುವುದು ಹಾಗೂ ಅಲ್ಲಿಗೆ ಆಗಮಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ಅವರಿಗೆ ತುಳಿಯುವುದು ಹಾಗೂ ಹೊಡೆಯುವುದು ಕಾಣಿಸುತ್ತದೆ.

- Advertisement -



Join Whatsapp