ಠಾಣೆಯೊಳಗೆ ನುಗ್ಗಿ ಪೊಲೀಸರಿಗೆ ಥಳಿಸಿದ ಗುಂಪು

Prasthutha|

- Advertisement -

ದೆಹಲಿ: ಗುಂಪೊಂದು ಪೊಲೀಸ್ ಠಾಣೆಯೊಳಗೆ ನುಗ್ಗಿ ಪೊಲೀಸರಿಗೆ ಥಳಿಸಿದ ಘಟನೆ ನವದೆಹಲಿಯ ಆನಂದ್ ವಿಹಾರ್ ಠಾಣೆಯಲ್ಲಿ ನಡೆದಿದೆ.

ಘಟನೆಯ ವೀಡಿಯೋವನ್ನು ಮತ್ತೊಬ್ಬ ಪೋಲೀಸ್ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ವೀಡಿಯೋದಲ್ಲಿ 10-12 ಜನರ ಗುಂಪೊಂದು ಪೊಲೀಸರನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಯಾರೂ ದಾಳಿಕೋರರನ್ನು ತಡೆಯಲು ಪ್ರಯತ್ನಿಸುವುದಿಲ್ಲ .ಕಾನ್‌ ಸ್ಟೆಬಲ್ ಕ್ಷಮೆ ಕೇಳಿದರೂ, ಆತನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ.

ಪೊಲೀಸರಿಗೆ ಏಕೆ ಥಳಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಘಟನೆ ಆಗಸ್ಟ್ 3 ರಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್​ಗೆ ಯಾರು ಥಳಿಸಿದರು ಎಂದು ಇನ್ನೂ ಪತ್ತೆಯಾಗಿಲ್ಲ.

Join Whatsapp