ನೂಪುರ್ ಶರ್ಮಾ ಬೆಂಬಲಿಸಿದ್ದ ಹಿಂದೂ ಸೇವಾ ಸಮಿತಿಯ ಪ್ರಾಂತೀಯ ಅಧ್ಯಕ್ಷನ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು !

Prasthutha|

ನವದೆಹಲಿ: ಪ್ರವಾದಿ ನಿಂದನೆ ಮಾಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಲು ಪತ್ರಿಕಾಗೋಷ್ಠಿ ನಡೆಸಿದ್ದ ಹಿಂದೂ ಸೇವಾ ಸಮಿತಿಯ ಸ್ಥಾಪಕ ಮತ್ತು ಪ್ರಾಂತೀಯ ಅಧ್ಯಕ್ಷ ಪ್ರದೀಪ್ ಶರ್ಮಾ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -


ಪ್ರದೀಪ್ ಶರ್ಮಾ ವಿರುದ್ಧ ಸೆಕ್ಷನ್ 153 ಎ (ದ್ವೇಷವನ್ನು ಹರಡುವ ಪ್ರಯತ್ನ) ಮತ್ತು 295 ಎ (ಒಂದು ವರ್ಗವನ್ನು ಅವಮಾನಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಜೂನ್ 13 ರಂದು ಪ್ರದೀಪ್ ಶರ್ಮಾ ಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp