ಪೊಲೀಸ್ ನೇಮಕಾತಿ: ರನ್ನಿಂಗ್ ರೇಸ್’ನಲ್ಲಿದ್ದಾಗ ತಲೆ ತಿರುಗಿ ಬಿದ್ದು ಯುವಕ ಮೃತ್ಯು

Prasthutha|

ಮುಂಬೈ: ಪೊಲೀಸ್ ನೇಮಕಾತಿಯ ವೇಳೆ ಯುವಕನೋರ್ವ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

- Advertisement -


ಗಣೇಶ್ ಉತ್ತಮ್ ಉಗಲೆ (26) ಮೃತ ಯುವಕ ಎಂದು ಗುರುತಿಸಲಾಗಿದೆ.


ಮುಂಬೈ ಪೊಲೀಸರು ಹುದ್ದೆಗೆ ಹಾಜರಾಗುವವರಿಗೆ ದೈಹಿಕ ಪರೀಕ್ಷೆಗಳನ್ನು ನಡೆಸುತ್ತಿದ್ದರು. ಈ ವೇಳೆ ಗಣೇಶ್ ಕೂಡ ಭಾಗವಹಿಸಲು ಬಂದಿದ್ದ. 1,600 ಮೀ. ಓಟ ಓಡುತ್ತಿದ್ದಾಗ ಗಣೇಶ್ ತಲೆ ತಿರುಗಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



Join Whatsapp