ರೈಲಿನಡಿಗೆ ಬೀಳಲಿದ್ದ ಮಹಿಳೆಯನ್ನು ಸಾಹಸಮಯ ರೀತಿಯಲ್ಲಿ ರಕ್ಷಿಸಿದ ಪೊಲೀಸ್ ಸಿಬ್ಬಂದಿ

Prasthutha|

ನವದೆಹಲಿ: ಚಲಿಸುತ್ತಿರುವ ರೈಲಿನಿಂದ ಇಳಿಯುವ ವೇಳೆ ಸಮತೋಲನ ಕಳೆದುಕೊಂಡು ರೈಲಿನಡಿಗೆ ಬೀಳಲಿದ್ದ ಮಹಿಳೆಯನ್ನು ಕರ್ತವ್ಯ ನಿರತ ರೈಲ್ವೇ ಸಂರಕ್ಷಣಾ ಪಡೆ (ಆರ್.ಪಿ.ಎಫ್) ಸಿಬ್ಬಂದಿಯೋರ್ವ ಯಶಸ್ವಿಯಾಗಿ ರಕ್ಷಿಸಿದ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಘಟನೆಯ ಕುರಿತು ಸಿಸಿಟಿವ್ ದೃಶ್ಯಾವಳಿಗಳನ್ನು ಟ್ವೀಟ್ ಮೂಲಕ ಹಂಚಿಕೊಂಡಿರುವ ರೈಲ್ವೇ ಇಲಾಖೆ ವೀಡಿಯೋದಲ್ಲಿ ಮಹಿಳೆ ರೈಲಿನಿಂದ ಜಿಗಿಯುತ್ತಿರುವ ದೃಶ್ಯವಿದೆ.

- Advertisement -


ತಕ್ಷಣ ಕಾರ್ಯಪ್ರವೃತ್ತರಾದ ಆರ್.ಪಿ.ಎಫ್ ಸಬ್ ಇನ್ಸ್ ಪೆಕ್ಟರ್ ಬಬ್ಲು ಕುಮಾರ್ ಓಡಿ ಬಂದು ಆಕೆಯನ್ನು ಪ್ಲಾಟ್ ಫಾರ್ಮ್ ನಿಂದ ಎಳೆದು ಹಾಕಿ ರಕ್ಷಿಸಿದ ಸಾಹಸಮಯ ದೃಶ್ಯ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಸಹ ಪ್ರಯಾಣಿಕನೊಬ್ಬ ನೆರವಿಗೆ ಧಾವಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರೈಲಿನಿಂದ ಬಿದ್ದು ಸಾವಿನಂಚಿನಲ್ಲಿದ್ದ ಮಹಿಳೆಯ ಜೀವವನ್ನು ರಕ್ಷಿಸಿದ ಆರ್.ಪಿ.ಎಫ್ ಸಿಬ್ಬಂದಿಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Join Whatsapp