ಪೊಲೀಸ್ ಅಧಿಕಾರಿ ಅಮಾನುತು: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ಶಿವಮೊಗ್ಗ: ಟೋಯಿಂಗ್ ವಿಚಾರವಾಗಿ ವಿಕಲಚೇತನ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ಬೈದು ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಆರೋಪಿ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ಎಎಸ್ ಐ ನಾರಾಯಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -

ಅಸಹಾಯಕ ಮಹಿಳೆಯ ಮೇಲೆ, ಪೊಲೀಸ್ ಅಧಿಕಾರಿಯೊಬ್ಬರು, ಅವಾಚ್ಯ ಮಾತುಗಳನ್ನು ಬಳಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ, ತನಿಖೆಗೆ ಆದೇಶಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಆಪಾದಿತ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಯಾರೇ ಆದರೂ ಕಾನೂನನ್ನು ಕೈಗೆ ತೆಗೆದುಕೊಳ್ಳ ಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ, ಎಂದು ತಿಳಿಸಿರುವ ಸಚಿವರು,ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ, ವರದಿ ನೀಡುವಂತೆ, ನಿರ್ದೇಶಿಸಿದ್ದಾರೆ.

- Advertisement -

ಘಟನೆಯ ಹಿನ್ನೆಲೆ

ಟೋಯಿಂಗ್ ವಿಚಾರವಾಗಿ ಮಹಿಳೆ ಮತ್ತು ಎಎಸ್ ಐ ನಡುವೆ ಮಾತಿನ ಚಕಮಕಿ ನಡೆದಿದೆ. ವಾಹನವನ್ನು ಟೋಯಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದ ಮಹಿಳೆ, ಕರ್ತವ್ಯ ನಿರತ ಎಎಸ್ಐ ತಲೆಗೆ ಕಲ್ಲಿನಿಂದ ಹೊಡೆದಿದ್ದರು. ಸಿಟ್ಟಾದ ಎಎಸ್ಐ, ನಡುರಸ್ತೆಯಲ್ಲಿ ಮಹಿಳೆಯನ್ನು ಅಟ್ಟಾಡಿಸಿ ಹಿಡಿದು ಬೂಟುಗಾಲಿನಿಂದ ಒದ್ದಿದ್ದರು. ಬಿಡಿಸಲು ಹೋದ ಸ್ಥಳೀಯರ ವಿರುದ್ಧವೂ ಎಎಸ್ಐ ಹರಿಹಾಯ್ದಿದ್ದಾರೆ. ಈ ದೃಶ್ಯದ ವಿಡಿಯೊ ವೈರಲ್ ಆಗಿತ್ತು.

Join Whatsapp