ಗಾಜಿಯಾಬಾದ್ ನಲ್ಲಿ ‘ಧರ್ಮ ಸಂಸದ್’ ನಡೆಸದಂತೆ ಯತಿ ನರಸಿಂಗಾನಂದ್ ಗೆ ಪೊಲೀಸ್ ನೋಟಿಸ್

Prasthutha|

ಗಾಜಿಯಾಬಾದ್: ಕೋಮು ಪ್ರಚೋದನಕಾರಿ ಹೇಳಿಕೆಗಳ ಮೂಲಕ ವಿವಾದಗಳನ್ನು ಹುಟ್ಟುಹಾಕುವ ಯತಿ ನರಸಿಂಗಾನಂದ್ ಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ನೀಡಿದ್ದು, ‘ಧರ್ಮ ಸಂಸದ್’ ಮತ್ತು ಪೂರ್ವಸಿದ್ಧತಾ ಸಭೆಯನ್ನು ಆಯೋಜಿಸದಂತೆ ಆದೇಶ ಹೊರಡಿಸಿದ್ದಾರೆ.

- Advertisement -

ನರಸಿಂಗಾನಂದ್, ಬಿಜೆಪಿಯ ಮಾಜಿ ಸಂಸದ ಬೈಕುಂತ್ ಲಾಲ್ ಶರ್ಮಾ ಅವರ ಜನ್ಮದಿನವಾದ ಡಿಸೆಂಬರ್ 17 ರಿಂದ ಮೂರು ದಿನಗಳ ಕಾಲ ‘ಧರ್ಮ ಸಂಸದ್’ ನಡೆಸಲು ಕರೆ ನೀಡಿದ್ದು, ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಯೋಜನೆಗಳನ್ನು ರೂಪಿಸಲು ಡಿಸೆಂಬರ್ 06 ರಂದು ಪೂರ್ವಸಿದ್ಧತಾ ಸಭೆಯನ್ನು ಕರೆಯಲಾಗಿತ್ತು.

ಗಾಜಿಯಾಬಾದ್ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಇರಾಜ್ ರಾಜಾ, ನೂರಾರು ಮಠಾಧೀಶರು ಭಾಗವಹಿಸುವ ನಿರೀಕ್ಷೆಯಿರುವ ಮೂರು ದಿನಗಳ ‘ಧರ್ಮ ಸಂಸದ್’ಗೆ ಪೊಲೀಸರು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಅದಲ್ಲದೆ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಸಿಆರ್ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

- Advertisement -

ನರಸಿಂಗಾನಂದ ಗೆ ಪೊಲೀಸರು ಗುರುವಾರ ನೋಟಿಸ್ ನೀಡಿದ್ದು, ಧರ್ಮ ಸಂಸದ್ ಮತ್ತು ಪೂರ್ವಸಿದ್ಧತಾ ಸಭೆಯನ್ನು ಆಯೋಜಿಸದಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನರಸಿಂಗಾನಂದ್, ಧರ್ಮ ಸಂಸದ್ ಅನ್ನು ದೇವಾಲಯದ ಆವರಣದಲ್ಲಿ ನಡೆಸಲಾಗುವುದು, ಅದಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ. ಮತ್ತು, ಇದು ಮೊದಲ ಬಾರಿಗೆ ನಡೆಯುತ್ತಿಲ್ಲ. ನಾವು ಅದನ್ನು ಯಾವುದೇ ಬೆಲೆ ತೆತ್ತಾದರೂ ಆಯೋಜಿಸುತ್ತೇವೆ. ಒಂದು ವೇಳೆ ಪೊಲೀಸರು ಮತ್ತು ಆಡಳಿತವು ಅಡೆತಡೆಗಳನ್ನು ಉಂಟುಮಾಡಿದರೆ, ನಾವು ಅದರ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಹೇಳಿದ್ದಾನೆ.



Join Whatsapp