‘ಪೊಲೀಸರೇ ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು’: ಮಣಿಪುರ ಬೆತ್ತಲೆ ಮೆರವಣಿಗೆ, ಅತ್ಯಾಚಾರ ಸಂತ್ರಸ್ಥೆಯ ಹೇಳಿಕೆ

Prasthutha|

ಇಂಫಾಲ: ಪೊಲೀಸರೇ ದುಷ್ಕರ್ಮಿಗಳ ನಡುವೆ ಬಿಟ್ಟು ಹೋದರು ಎಂದು ಮಣಿಪುರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಸಂತ್ರಸ್ಥೆ ಹೇಳಿಕೆ ನೀಡಿದ್ದಾರೆ.

- Advertisement -


ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾದ ಬೆನ್ನಲ್ಲೇ ಸ್ವತಃ ಅಂದು ನಡೆದ ಬೆತ್ತಲೆ ಮೆರವಣಿಗೆಯ ಸಂತ್ರಸ್ಥೆ ಕುಕಿ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ಪೊಲೀಸರು ನಮ್ಮನ್ನು ಜನಸಮೂಹದೊಂದಿಗೆ ಬಿಟ್ಟು ಹೋಗಿದ್ದರು ಎಂದು ಅಂದಿನ ಭೀಕರ ಸಂದರ್ಭವನ್ನು ವಿವರಿಸಿದ್ದಾರೆ.
ಸಂತ್ರಸ್ತೆಯರಲ್ಲಿ ಒಬ್ಬರಾಗಿರುವ 20 ವರ್ಷದ ಮಹಿಳೆ ದುಷ್ಕರ್ಮಿಗಳು ನಮ್ಮನ್ನು ಎಳೆದೊಯ್ಯುತ್ತಿದ್ದಾಗ ಅಲ್ಲಿದ್ದ ಪೊಲೀಸರು ನಮ್ಮನ್ನು ಜನಸಮೂಹಕ್ಕೆ ಒಪ್ಪಿಸಿ ಏನೂ ಕ್ರಮ ಕೈಗೊಳ್ಳದೇ ಹೊರಟು ಹೋದರು ಎಂದು ಹೇಳಿದ್ದಾರೆ.


ಕೊಲೆಗಡುಕ ಗುಂಪು ತಮ್ಮ ಹಳ್ಳಿಯ ಮೇಲೆ ದಾಳಿ ನಡೆಸಿದಾಗ, ಅವರ ಜೊತೆಯಲ್ಲಿ ಪೊಲೀಸರು ಇದ್ದರು. ದುಷ್ಕರ್ಮಿಗಳು ಮಹಿಳೆಯರನ್ನು ಎತ್ತಿಕೊಂಡು ತಮ್ಮ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಜನಸಮೂಹದೊಂದಿಗೆ ರಸ್ತೆ ಮೇಲೆ ಎಳೆದಾಡಿದರು. ಆದರೆ ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪೊಲೀಸರು ಏನೂ ಕ್ರಮ ಕೈಗೊಳ್ಳದೇ ನಮ್ಮನ್ನು ಅವರಿಗೆ ಒಪ್ಪಿಸಿ ಹೊರಟು ಹೋದರು. ನಮ್ಮ ತಂದೆ ಮತ್ತು ಸಹೋದರನನ್ನೂ ಇದೇ ದುಷ್ಕರ್ಮಿಗಳ ಗುಂಪು ಕೊಂದು ಹಾಕಿದೆ. ಬಳಿಕ ನಮ್ಮನ್ನು ಬೆತ್ತಲೆ ಮಾಡಿ ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ಬಳಿಕ ನಾವು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿ ಜೀವ ಉಳಿಸಿಕೊಂಡೆವು ಎಂದು ಹೇಳಿದ್ದಾರೆ.

Join Whatsapp