ಪ್ರವಾದಿ ನಿಂದನೆ| ಕೊನೆಗೂ ಆರೋಪಿಯನ್ನು ಬಂಧಿಸಿದ ಪೊಲೀಸರು

Prasthutha|

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾದಿಯನ್ನು ನಿಂದಿಸಿ ಕಾಮೆಂಟ್ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಐವರ್ನಾಡಿನ ಜಗದೀಶ್ ಕೈವಲ್ತಡ್ಕನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

- Advertisement -


ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದರೂ ಪೊಲೀಸರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಹಿಂದೇಟು ಹಾಕುತ್ತಿದ್ದರು ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು.


ಪ್ರವಾದಿ ನಿಂದನೆ ಮಾಡಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಪೋಲಿಸರ ನಡೆಯನ್ನು ಖಂಡಿಸಿ ಮುಸ್ಲಿಮ್ ಒಕ್ಕೂಟ ನಿನ್ನೆ ಸಭೆ ನಡೆಸಿತ್ತು. ಸಭೆಯಲ್ಲಿ ತಾಲೂಕಿನ ಎಲ್ಲಾ ಮುಸ್ಲಿಮ್ ಸಂಘಟನೆಗಳ ಪ್ರತಿನಿಧಿಗಳು, ಮುಖಂಡರು ಪಾಲ್ಗೊಂಡು, ಪ್ರಕರಣದಲ್ಲಿ ತಾರತಮ್ಯ ನೀತಿ, ಆರೋಪಿ ವಿರುದ್ಧ ಕಠಿಣ ಸೆಕ್ಷನ್ ದಾಖಲಿಸದ ಮತ್ತು ಬಂಧಿಸದ ಪೋಲಿಸರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದೇ ಬರುವ ಬುಧವಾರ 17ನೇ ತಾರೀಕಿನಂದು ಪ್ರತಿಭಟನೆಯನ್ನೂ ಹಮ್ಮಿಕೊಂಡಿದ್ದರು.



Join Whatsapp