ಕಲಬುರಗಿ: ಕೆಇಎ ನಡೆಸಿದ ಎಫ್ ಡಿಎ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ಆಗಿರುವ ಆರ್ ಡಿ ಪಾಟೀಲ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆತಂದಾಗ ಓರ್ವ ಕಾನ್ಸ್ ಟೇಬಲ್ ನಮಸ್ಕಾರ ಮಾಡಿದ ಹಿನ್ನಲೆ ಅಮಾನತು ಮಾಡಲಾಗಿದೆ.
ಆರ್ ಡಿ ಪಾಟೀಲ್ ಗೆ ಸಲಾಂ ಎಂದಿದ್ದ ನಗರದ ಬ್ರಹ್ಮಪೂರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮಾಳಪ್ಪ ಭಾಸಗಿ ಎಂಬುವವರನ್ನು ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನರವರು ಅಮಾನತಗೊಳಿಸಿ ಆದೇಶಿಸಿದ್ದಾರೆ.