ಉಳ್ಳಾಲ(ಮಂಗಳೂರು): ಕೆಎಸ್ಆರ್ಪಿಯ ಏಳನೇ ಬೆಟಾಲಿಯನ್ನ ನೂತನ ಬ್ಯಾಚ್ನ ಪೊಲೀಸ್ ಕಾನ್ಸ್ಟೇಬಲ್ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸೈಗೋಳಿ ಸೈಟ್ನಲ್ಲಿ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.
ಬೆಳಗಾವಿ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್ ಎಂದು ಗುರುತಿಸಲಾಗಿದೆ.
ತಿಂಗಳ ಹಿಂದೆಯಷ್ಟೇ ವಿಮಲನಾಥ ಅವರ ತಾಯಿ ತೀರಿಕೊಂಡಿದ್ದು, ಅದೇ ದುಃಖದಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ನೂತನ ಬ್ಯಾಚ್ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.