ರಂಝಾನ್ ವೇಳೆ ತಡರಾತ್ರಿ ವರೆಗೆ ಅಂಗಡಿ ತೆರೆದಿಟ್ಟ ಮುಸ್ಲಿಮ್ ವ್ಯಕ್ತಿಯ ಮೇಲೆ ಪೊಲೀಸ್ ದೌರ್ಜನ್ಯ; ವೀಡಿಯೋ ವೈರಲ್

Prasthutha|

ಔರಂಗಾಬಾದ್: ರಂಝಾನ್ ವೇಳೆ ತಡರಾತ್ರಿ ವರೆಗೆ ಅಂಗಡಿ ತೆರೆದಿದ್ದಕ್ಕಾಗಿ ಪೊಲೀಸ್ ಕಾನ್ ಸ್ಟೇಬಲ್ ನೋರ್ವ ಮುಸ್ಲಿಮ್ ವ್ಯಕ್ತಿಗೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

- Advertisement -

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ಈ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮುಸ್ಲಿಮರ ಪವಿತ್ರ ರಂಝಾನ್ ತಿಂಗಳ ಕೊನೆಯ ಭಾಗದಲ್ಲಿ ಈದ್ ಆಚರಣೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಲು ಮಾರುಕಟ್ಟೆಗೆ ಜನರು ಬರುವುದು ವಾಡಿಕೆ. ಇದಕ್ಕಾಗಿ ಮಳಿಗೆ ಮಾಲಕರು ತಡರಾತ್ರಿ ಅಂಗಡಿಗಳನ್ನು ತೆರೆದಿಡುತ್ತಾರೆ.

- Advertisement -

ಇದನ್ನೇ ನೆಪವಾಗಿಟ್ಟು ಪೊಲೀಸ್ ಅಧಿಕಾರಿಗಳು ಶಾಪಿಂಗ್ ಕಾಂಪ್ಲೆಕ್ಸ್ ಬಂದು, ಅಲ್ಲಿದ್ದ ವ್ಯಕ್ತಿಯೊಬ್ಬನನ್ನು ಎಳೆದು ಹಾಕಿ ಮುಖದ ಭಾಗಕ್ಕೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp