ತುಮಕೂರಿನಲ್ಲಿ ಮೂವರ ಹತ್ಯೆಯಲ್ಲಿ ಪೊಲೀಸರ ಶಾಮೀಲಾತಿ ಇದೆ: ರಿಯಾಝ್ ಪರಂಗಿಪೇಟೆ

Prasthutha|

ಬೆಳ್ತಂಗಡಿ: ಚಿನ್ನದ ನಿಧಿ ಎಂಬ ಮೋಸದ ಜಾಲಕ್ಕೆ ಬಲಿಯಾಗಿ ತುಮಕೂರಿನಲ್ಲಿ ಸುಟ್ಟು ಕರಕಲಾದ ಬೆಳ್ತಂಗಡಿಯ ಇಸಾಕ್ ಮದ್ದಡ್ಕ , ಸಾಹುಲ್ ಹಮೀದ್ ಉಜಿರೆ ಮತ್ತು ಸಿದ್ದೀಕ್ ಶಿರ್ಲಾಲ್ ರವರ ಮನೆಗೆ SDPI ನಿಯೋಗ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದೆ.

- Advertisement -

ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖಂಡ ರಿಯಾಝ್ ಪರಂಗಿಪೇಟೆ, ಇಂತಹ ಘಟನೆಗಳು ಗೃಹ ಸಚಿವರ ತವರಿನಲ್ಲಿ ಈ ಘಟನೆ ನಡೆದಿದೆ. ಇಂತಹ ಘೋರ ಘಟನೆ ನಡೆಯುತ್ತಿರುವಾಗ ಪೊಲೀಸರು ಏನು ಮಾಡುತ್ತಿದ್ದಾರೆ? ಪೊಲೀಸರಿಗೆ ಈ ಘಟನೆಯಲ್ಲಿ ಶಾಮೀಲಾತಿ ಇದೆ ಎಂದು ಅನುಮಾನ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೊಂದು ಘೋರ ಘಟನೆಯಾಗಿದೆ. ನಿಧಿಯಾಸೆ ತೋರಿಸಿ ಶ್ರೀಮಂತರನ್ನು, ನಿರುದ್ಯೋಗಿಗಳನ್ನು ಸುಲಿಗೆ ಮಾಡುವ, ಕ್ರೂರವಾಗಿ ಕೊಲ್ಲುವ ಇಂತಹ ಘಟನೆಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

- Advertisement -

ಯುವ ಸಮುದಾಯ ಹಣದ ಆಮಿಷಗಳಿಗೆ ಒಳಗಾಗಿ ನಿಧಿ ಶೋಧ, ಕರಿನೋಟು, ಆರ್.ಪಿ, ನಕ್ಷತ್ರ ಆಮೆ ಮುಂತಾದ ಮೋಸದ ಜಾಲ ಮತ್ತು ಅಡ್ಡದಾರಿಯ ವ್ಯವಹಾರಗಳ ಬಗ್ಗೆ ಜಾಗೃತರಾಗಿಬೇಕಾಗಿದೆ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.



Join Whatsapp