ಗುವಾಹಟಿ: ಅಸ್ಸಾಮಿನ ಲತಾಸಿಲ್ ಪೊಲೀಸ್ ಠಾಣೆಯಲ್ಲಿ ‘ದಿ ಹಿಂದೂ’ ಸಂಪಾದಕ ಸುರೇಶ್ ನಂಬತ್ ಮತ್ತು ವಿದ್ವಾಂಸರಾದ ಸೂರಜ್ ಗೊಗೊಯ್ ಮತ್ತು ಆಂಗ್ಷುಮನ್ ಚೌಧರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಸ್ಸಾಂ ನ ದರ್ರಾಂಗ್ ನಲ್ಲಿ ಇತ್ತೀಚೆಗೆ ನಡೆದ ಮುಸ್ಲಿಮರ ಮೇಲಿನ ದೌರ್ಜನ್ಯದ ವರದಿಯನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ವಕೀಲ ಬಿರಾಜಮೋಹನ್ ಹಜಾರಿಕಾ ಸೇರಿದಂತೆ ಇತರ ನಾಲ್ವರು ನೀಡಿದ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.
ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ವಾಂಸ ಸೂರಜ್ ಗೊಗೊಯ್ ಅವರು ‘ದಿ ಹಿಂದೂ’ ಪತ್ರಿಕೆಯಲ್ಲಿ ಅಸ್ಸಾಮಿ ರಾಷ್ಟ್ರೀಯತೆಯ ಬೇಗೆಯ ಕಿರಣಗಳು ಎಂಬ ಲೇಖವನ್ನು ಬರೆದಿದ್ದರು. ನವದೆಹಲಿಯ ಶಾಂತಿ ಮತ್ತು ಸಂಘರ್ಷ ಅಧ್ಯಯನ ಸಂಸ್ಥೆಯ ಹಿರಿಯ ಸಂಶೋಧಕ ಆಂಗ್ಷುಮನ್ ಚೌಧರಿ ತನ್ನ ಬ್ಲಾಗ್‌ನಲ್ಲಿ “ಮೊಯಿನುಲ್ ಹಕ್ ಮತ್ತು ಬಿಜೋಯ್ ಬನಿಯಾ” ಎಂಬ ಲೇಖನವನ್ನು ಬರೆದಿದ್ದಾರೆ.
ಸೆಪ್ಟೆಂಬರ್ 23 ರ ಮೊಯಿನುಲ್ ಹಕ್ ಮೃತದೇಹದ ಮೇಲೆ ಜಿಗಿದ ಛಾಯಾಗ್ರಾಹಕ ಬಿಜೊಯ್ ಬನಿಯಾನನ್ನು ಉಲ್ಲೇಖಿಸಿ ಈ ಲೇಖನ ಬರೆಯಲಾಗಿತ್ತು. ಆಂಗ್ಶುಮಾನ್ ಚೌಧರಿ ತನ್ನ ಲೇಖನದಲ್ಲಿ 23 ರ ಕ್ರೌರ್ಯದ ವಿವಿಧ ಅಂಶಗಳನ್ನು ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ವಿರುದ್ಧ ಐಪಿಸಿ ಸೆಕ್ಷನ್ 153, 153 ಎ, 153 ಬಿ, 505, 34, 1860 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.