ಒತ್ತುವರಿ ತೆರವು ಹೆಸರಿನಲ್ಲಿ ಪೊಲೀಸ್ ದೌರ್ಜನ್ಯ

Prasthutha|

ಗಾಝಿಯಾಬಾದ್: ಒತ್ತುವರಿ ತೆರವು ಹೆಸರಿನಲ್ಲಿ ಉತ್ತರ ಪ್ರದೇಶ ಸರ್ಕಾರ ಕಟ್ಟಡ ಧ್ವಂಸಗೊಳಿಸುವ ಪ್ರಕ್ರಿಯೆ ಮುಂದುವರಿಸಿದ್ದು, ಗಾಝಿಯಾಬಾದ್’ನ ಸಾಹಿಬಾಬಾದ್’ನಲ್ಲಿ ಯಾವುದೇ ನೋಟಿಸ್ ನೀಡದೆ ಮುಸ್ಲಿಮರ ಮನೆಗಳನ್ನು ಧ್ವಂಸಗೊಳಿಸಿದೆ.

- Advertisement -


ಬುಲ್ಡೋಜರ್ ತಂದು ಸಾರ್ವಜನಿಕರ ವಿರೋಧದ ನಡುವೆಯೇ ಕಟ್ಟಡವನ್ನು ಧ್ವಂಸಗೊಳಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಮಹಿಳೆಯೊಬ್ಬರು ತಮ್ಮ ಮನೆಯನ್ನು ಧ್ವಂಸಗೊಳಿಸದಂತೆ ಬೇಡಿಕೊಂಡರೂ ಪೊಲೀಸರು ಆಕೆಯೊಂದಿಗೆ ನಿರ್ದಯವಾಗಿ ವರ್ತಿಸಿ ಬುಲ್ಡೋಜರ್ ಕಾರ್ಯಾಚರಣೆ ಮುಂದುವರಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.


ನೋಟಿಸ್ ನೀಡದೆ ಕಾರ್ಯಾಚರಣೆ ಕೈಗೊಂಡಿದ್ದನ್ನು ಪ್ರಶ್ನಿಸಿದ ಯುವಕನೋರ್ವನನ್ನು ಠಾಣೆಗೆ ಕರೆದೊಯ್ದು ಥಳಿಸಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.

Join Whatsapp