ದೆಹಲಿ ಗಲಭೆ ತನಿಖೆಯಲ್ಲಿ ಪೊಲೀಸರಿಂದ ಪಕ್ಷಪಾತ: ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಮಾಜಿ ನಿರ್ದೇಶಕ ರೈ

Prasthutha|

ಹೊಸದಿಲ್ಲಿ: ಗಲಭೆ ಪ್ರಕರಣಗಳ ದೆಹಲಿ ಪೊಲೀಸರ ತನಿಖೆಯು ಹೆಚ್ಚು ಪೂರ್ವಾಗ್ರಹಪೀಡಿತವಾಗಿದ್ದು, ಸಂತ್ರಸ್ತರನ್ನು ಸಂಚುಕೋರರನ್ನಾಗಿ ಮಾಡುವ ಸಕ್ರಿಯ ಪಿತೂರಿ ನಡೆದಿದೆ. ಇದು ಸಿಎಎ ವಿರೋಧಿ ಆಂದೋಲನ ಮತ್ತು ಫೆಬ್ರವರಿಯಲ್ಲಿ ಈಶಾನ್ಯ ದೆಹಲಿ ಗಲಭೆ ಹಿಂದಿನ ಪಿತೂರಿಯನ್ನು ಬಹಿರಂಗಪಡಿಸುತ್ತದೆ ಎಂದು ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ನಿರ್ದೇಶಕ ವಿಯಾಕ್ಷ್ ನಾರಾಯಣ್ ರೈ ಆರೋಪಿಸಿದ್ದಾರೆ.

- Advertisement -

ಸಂಘಟನೆಯೊಂದು ಆಯೋಜಿಸಿದ್ದ ವೆಬಿನಾರ್ ನಲ್ಲಿ ಮಾತನಾಡಿದ ರೈ, ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಅತ್ಯಂತ ದುರ್ಬಲವಾದ ಸಾಕ್ಷ್ಯಗಳ ಮೇಲೆ ಆಧಾರಿತವಾಗಿದ್ದು, ಕಾನೂನಿನ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಗೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪೊಲೀಸರಲ್ಲಿ ಈಗಾಗಲೇ ಸಾಮಾಜಿಕ ಪಕ್ಷಪಾತವಿದ್ದು, ದೆಹಲಿಯ ವಿಷಯದಲ್ಲಿ ಇದನ್ನು ರಾಜಕೀಯ ಪಕ್ಷಪಾತದೊಂದಿಗೆ ಬೆರೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಯುಪಿಯಲ್ಲಿ ನಡೆಯುತ್ತಿರುವ ಎನ್ಕೌಂಟರ್ ಗಳು ನಕಲಿ ಎಂದು ಅವರು ಆರೋಪಿಸಿದ್ದಾರೆ.



Join Whatsapp