ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್​ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಬಂಧನ

Prasthutha|

ಚಿಕ್ಕಮಗಳೂರು: ವಿಕ್ಟೋರಿಯಾ ರಾಣಿಯ ಕಾಲದ, ಹಿತ್ತಾಳೆಯ ಟೆಲಿಸ್ಕೋಪ್​ನ್ನು ಮಾರಾಟಕ್ಕೆ ಯತ್ನಿಸಿದ ಮೈಸೂರು ಮೂಲದ ವ್ಯಕ್ತಿಯನ್ನು ಕಡೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿಯನ್ನು ಮೈಸೂರಿನ ಸಂಕ್ರಾತಿ ವೃತ್ತದ ಕೆಂಪರಾಜ್ ಎಂದು ಗುರುತಿಸಲಾಗಿದೆ.

ಟೆಲಿಸ್ಕೋಪ್ ಅನ್ನು ಮೈಸೂರಿನಲ್ಲಿ ಕಡಿಮೆ ಬೆಲೆಗೆ ಖರೀದಿಸಿದ್ದ ಕೆಂಪರಾಜ್, ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ 15 ಲಕ್ಷ ರೂಪಾಯಿಗೆ ಮಾರಾಟಕ್ಕೆ ಯತ್ನಿಸಿದ್ದಾನೆ. ಈ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Join Whatsapp