ನಕಲಿ ಅಕೌಂಟ್ ಗಳ ವಿರುದ್ಧ ಕ್ರಮ ಆರಂಭಿಸಿದ ಮುಂಬೈ ಪೊಲೀಸರು: ಓರ್ವನ ಬಂಧನ

Prasthutha|

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಮತ್ತು ಇತರ ನಾಯಕರ ವಿರುದ್ಧ ಸಾಮಾಜಿಕ ಜಾಲ ತಾಣಗಳಲ್ಲಿ ಅವಮಾನಕಾರಿ ಹೇಳಿಕೆಗಳನ್ನು ಪ್ರಕಟಿಸಿದ್ದಕ್ಕಾಗಿ ಮುಂಬೈ ಪೊಲೀಸ್ ಅಪರಾಧ ಪತ್ತೆದಳದ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.

ವಿಶೇಷವಾಗಿ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮುಂಬೈ ಪೊಲೀಸರು ಮತ್ತು ರಾಜ್ಯ ಸರಕಾರವನ್ನು ನಿಂದಿಸುವ ಹಲವು ನಕಲಿ ಅಕೌಂಟ್ ಗಳ ಕುರಿತು ಮುಂಬೈ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

- Advertisement -

ಆರೋಪಿಯ ವಿರುದ್ಧ ಪೊಲೀಸರು ಅ.9 ರಂದು ಎಫ್.ಐ.ಆರ್ ಭಾರತೀಯ ದಂಡಸಂಹಿತೆ ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯು ಮಹಾರಾಷ್ಟ್ರದ ಮಹಿಳಾ ನಾಯಕರನ್ನೊಳಗೊಂಡಂತೆ ಹಲವು ರಾಜಕೀಯ ನಾಯಕರನ್ನು ನಿಂದಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

- Advertisement -