ಶಿರೂರು ಗುಡ್ಡ ಕುಸಿತ: ನಾಪತ್ತೆಯಾದ ಮೂವರ ಪತ್ತೆಗೆ ‘ಪೊಕಲೇನ್’ ಬಳಕೆ

Prasthutha|

ಉತ್ತರ ಕನ್ನಡ: ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

- Advertisement -

ಇನ್ನುಳಿದಂತೆ ನಾಪತ್ತೆಯಾದ ಮೂವರ ಪತ್ತೆಗೆ ಗಂಗಾವಳಿ ನದಿಯಲ್ಲಿ ಪೊಕಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ಮಣ್ಣು ತೆರವು ಕಾರ್ಯಾಚರಣೆ ಇಂದು ಮುಗಿದಿದೆ. ಗುಡ್ಡದ ಪಕ್ಕ ಕೇರಳದ ಲಾರಿ ಸಿಕ್ಕಿಲ್ಲ. ನದಿ ಪಕ್ಕದಲ್ಲಿ ಲಾರಿ ಬಿದ್ದಿರುವ ಸಾಧ್ಯತೆಯಿದೆ. ನಾಳೆ ಗೋಕಾಕ್ ನಿಂದ ಪೋಕ್ ಲೇನ್ ವಾಹನ ಬರುತ್ತಿದೆ. ನದಿಯೊಳಗೆ ಮಣ್ಣು ತೆಗೆದು ಕಾರ್ಯಾಚರಣೆ ನಡೆಸಲಿದೆ. ನಾಳೆ ಬಹುತೇಕ ಕೇರಳದ ಲಾರಿ ಸಿಗುವ ಸಾಧ್ಯತೆಯಿದ್ದು, ಕೇರಳದವರು ಕೇಸ್ ಮಾಡುವ ಬದಲು ನಮಗೆ ಸಹಕರಿಸಬೇಕು ಎಂದರು.

- Advertisement -

ಈ ಪೊಕಲೇನ್ ವೆಹಿಕಲ್, ‘ನದಿಯ ಆಳದಲ್ಲಿರುವ ಮಣ್ಣನ್ನು ತೆರವು ಮಾಡುವ ಯಾಂತ್ರಿಕ ವಾಹನವಾಗಿದೆ. ನದಿಯಲ್ಲಿ ಇನ್ನುಳಿದ ಮೃತ ದೇಹಗಳು ಇರುವ ಶಂಕೆ ವ್ಯಕ್ತವಾಗಿದ್ದು, ಕರ್ನಾಟಕದ ಇರ್ವರು ಹಾಗೂ ಓರ್ವ ಕೇರಳ ಮೂಲದ ವ್ಯಕ್ತಿಯ  ಮೃತ ದೇಹಗಳನ್ನು ಪತ್ತೆ ಮಾಡಬೇಕಿರುವ ಹಿನ್ನಲೆ ಶಾಸಕ ಸತೀಶ್ ಸೈಲ್ ‘ಪೊಕಲೇನ್’ ವ್ಯವಸ್ಥೆ ಮಾಡಿದ್ದಾರೆ. 



Join Whatsapp