ಬಿಹಾರದಲ್ಲಿ ವೀಡಿಯೊ ವಾರ್! | ನಿತೀಶ್ ಹಗರಣದ ಮೋದಿ ಹೇಳಿಕೆಯ ಹಳೆ ವೀಡಿಯೊ ಟ್ವೀಟ್ ಮಾಡಿದ ತೇಜಸ್ವಿ ಯಾದವ್

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣಾ ಕಾವು ಏರುತ್ತಿದ್ದಂತೆ, ಬಿಜೆಪಿ ಮತ್ತು ಆರ್ ಜೆಡಿ ನಡುವೆ ‘ವೀಡಿಯೊ ವಾರ್’ ಆರಂಭವಾಗಿದೆ. ಎರಡೂ ಪಕ್ಷಗಳ ಪ್ರಮುಖರು ಹಳೆಯ ವೀಡಿಯೊಗಳನ್ನು ಹಂಚಿಕೊಂಡು, ಪರಸ್ಪರ ಕೆಸರೆರಚಿಕೊಂಡಿದ್ದಾರೆ.

ಸಿಎಂ ನಿತೀಶ್ ಕುಮಾರ್ ಸರಕಾರದಲ್ಲಿ ಸುಮಾರು 30,000 ಕೋಟಿ ರೂ. ಭ್ರಷ್ಟಾಚಾರ ಹಗರಣ ನಡೆದಿದೆ ಎಂದು ಆಪಾದಿಸಿರುವ ಆರ್ ಜೆಡಿ ನಾಯಕ, ಮಾಜಿ ಸಿಎಂ ಲಾಲು ಪ್ರಸಾದ್ ಮಗ ತೇಜಸ್ವಿ ಯಾದವ್ ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಪ್ರಧಾನಿ ಮೋದಿಯವರು ಈ ಹಿಂದೆ ನಿತೀಶ್ ಕುಮಾರ್ ಸರಕಾರಕ್ಕೆ ಸಂಬಂಧಿಸಿ ಹೇಳಿದ್ದ 33 ಹಗರಣಗಳ ಕುರಿತ ಮಾಹಿತಿಯಿದೆ.

- Advertisement -

“ಗೌರವಾನ್ವಿತ ನಿತೀಶ್ ಕುಮಾರ್ ಜೀ ಅವರೇ 30,000 ಕೋಟಿ ರೂ. ಮೌಲ್ಯದ 60 ಹಗರಣಗಳು ನಡೆದಿವೆ. ಅವುಗಳಲ್ಲಿ 33 ಹಗರಣಗಳ ಪಟ್ಟಿಯನ್ನು ಐದು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ನೀಡಿದ್ದಾರೆ. ನೀವೇ ಅದನ್ನು ಕೇಳಬಹುದು’’ ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.

- Advertisement -