ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಬದಲು ನೀಟ್ ಬಗ್ಗೆ ಪ್ರಧಾನಿ ಮಾತಾಡಲಿ: ಒಮರ್ ಅಬ್ದುಲ್

Prasthutha|

ಶ್ರೀನಗರ: ಲೋಕಸಭಾ ಅಧಿವೇಶನದ ಮೊದಲ ದಿನ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುವ ಬದಲು ನೀಟ್ ಅಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕಿತ್ತು ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ ಹೇಳಿದ್ದಾರೆ.

- Advertisement -


ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ವಿರೋಧ ಪಕ್ಷಗಳ ಮೇಲೆ ದಾಳಿ ಮಾಡುವುದು ಪ್ರಧಾನ ಮಂತ್ರಿಗಳ ವಿಶೇಷ ಹಕ್ಕು. ಇತ್ತೀಚಿನ ಚುನಾವಣಾ ಫಲಿತಾಂಶದಿಂದ ಬಿಜೆಪಿಯು ಮೃದುವಾಗಿದೆ ಎಂದು ನಾವು ಭಾವಿಸುವುದಿಲ್ಲ. ನೀಟ್ ಹಗರಣದಿಂದ ತೊಂದರೆಗೀಡಾದ ಯುವಕ ಯವತಿಯರ ಬಗ್ಗೆ ಪ್ರಧಾನಿಯವರು ಕೆಲವು ಮಾತುಗಳನ್ನಾಡಿದ್ದರೆ ಸೂಕ್ತವಾಗಿರುತ್ತಿತ್ತು’ ಎಂದು ತಿಳಿಸಿದ್ದಾರೆ.


ದೇಶಕ್ಕೆ ಜವಾಬ್ದಾರಿಯುತ ಪ್ರತಿಪಕ್ಷದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ ಬೆನ್ನಲ್ಲೇ ಒಮರ್ ಈ ಮಾತುಗಳನ್ನಾಡಿದ್ದಾರೆ.

Join Whatsapp