ಪ್ರಧಾನಿ ನರೇಂದ್ರ ಮೋದಿ ಎರಡನೇ ವಿವೇಕಾನಂದ ಎಂದ ಶಿವಕಾಂತಾನಂದ ಮಹಾರಾಜ್‌

Prasthutha|

ಮೈಸೂರು: ಪ್ರಧಾನಿ ಮೋದಿಯನ್ನು ಸ್ವಾಮಿ ವಿವೇಕಾನಂದರಿಗೆ ಹೋಲಿಸುವ ಸಾಲಿಗೆ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯ ಶಿವಕಾಂತಾನಂದ ಮಹಾರಾಜ್‌ ಕೂಡ ಸೇರಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ಶಿವಕಾಂತಾನಂದ ಹೇಳಿದ್ದಾರೆ.

- Advertisement -

ಇಂದು ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಎಂಜಿನಿಯರ್‌ಗಳಿಗೆ ‘ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ’ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಸನ್ಯಾಸಿಯಾಗಲು ಆಶ್ರಮಕ್ಕೆ ಭೇಟಿ ನೀಡಿದ್ದರು. ಆದರೆ ನೀನು ಮಠಕ್ಕಿಂತ ಬೇರೆಡೆ ಕೆಲಸ ಮಾಡುವುದು ಸಾಕಷ್ಟಿದೆ ಎಂದು ಸ್ವಾಮೀಜಿ ವಾಪಾಸು ಕಳುಹಿಸಿದ್ದರು ಎಂದು ಹೇಳಿದರು.

ಪ್ರಧಾನಿ ಮೋದಿ, ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಮೈಸೂರಿಗೆ ಬರುತ್ತಿದ್ದು, ಪ್ರಸ್ತುತ ಯುವ ಜನಾಂಗದ ಪ್ರೇರಕ ಶಕ್ತಿಯಾಗಿ ಮೋದಿ ನಿಂತಿದ್ದಾರೆ, ನರೇಂದ್ರ ಮೋದಿ ಎರಡನೇ ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ಹೇಳಿದರು.

- Advertisement -

ನಮಗೆ ಸಂಸ್ಕೃತಿ, ಶಾಸ್ತ್ರಗಳು, ಗುರುಕುಲ ಶಿಕ್ಷಣ ವ್ಯವಸ್ಥೆ ಮೇಲೆ ನಂಬಿಕೆ ಇರಲಿಲ್ಲ, ನಾಚಿಕೆಯಿಂದ ತಲೆತಗ್ಗಿಸುವ ಪರಿಸ್ಥಿತಿಯಲ್ಲಿದ್ದಾಗ ಸ್ವಾಮಿ ವಿವೇಕಾನಂದರು ಸೂರ್ಯರಶ್ಮಿಯಂತೆ ಕಂಡರು ಎಂದು ಹೇಳಿದರು. ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರೆ, ಏನನ್ನಾದರು ಸಾಧಿಸಬಹುದು ಎಂದರು.

Join Whatsapp