ಸಾವರ್ಕರ್ ಜನ್ಮದಿನಕ್ಕೆ ಮೋದಿ, ಅಮಿತ್ ಶಾ ಟ್ವಿಟರ್ ನಮನ: ಸ್ವಾರಿ ಡೇ ಎಂದ ಟ್ವಿಟಿಗರು

Prasthutha|

ನವದೆಹಲಿ: ತನ್ನ ಬಿಡುಗಡೆಗಾಗಿ ಬ್ರಿಟಿಷರಲ್ಲಿ ಕ್ಷಮಾಪಣೆ ಕೇಳಿದ್ದ ವಿನಾಯಕ ದಾಮೋದರ್ ಸಾವರ್ಕರ್  ಜನ್ಮ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟ್ಟರ್ ನಲ್ಲಿ ಗೌರವ ನಮನ ಸಲ್ಲಿಸಿದ್ದಾರೆ. ಆದರೆ ಸಾಮಾಜಿಕ ವಲಯದಾದ್ಯಂತ ಸಾವರ್ಕರ್ ಜನ್ಮದಿನವನ್ನು ನೆಟ್ಟಿಗರು ‘ಸ್ವಾರಿ ಡೇ’ ಎಂದು ಟ್ರೆಂಡ್ ಮಾಡುತ್ತಿದ್ದಾರೆ.

- Advertisement -

‘ತಾಯಿ ಭಾರತೀಯ ವೀರ ಪುತ್ರ ವೀರ ಸಾವರ್ಕರ್ ಅವರಿಗೆ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಮತ್ತು  ಅಮಿತ್ ಶಾ ‘ರಾಷ್ಟ್ರೀಯತೆ, ಸ್ವಾತಂತ್ರ್ಯದ ಪ್ರತೀಕ ವೀರ ಸಾವರ್ಕರ್ ಅವರ ತ್ಯಾಗದ ಜೀವನ ನಮಗೆ ಸ್ಫೂರ್ತಿ ಮತ್ತು ಶಕ್ತಿಯನ್ನು ನೀಡುತ್ತಲೇ ಇರುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

ಆದರೆ ‘ಸಾವರ್ಕರ್ ಬಿಡುಗಡೆಗಾಗಿ ಬ್ರಿಟಿಷರಲ್ಲಿ ಕ್ಷಮಾಪಣೆ ಕೇಳಿ ತನ್ನನ್ನು ಉಳಿಸಿಕೊಂಡ ಹೇಡಿ’ ಎಂದು ಹೇಳುತ್ತಾ ಟ್ವಿಟರಿನಾದ್ಯಂತ ಸಾವರ್ಕರ್ ಜನ್ಮದಿನವಾದ ಇಂದು ಸ್ವಾರಿ ಡೇ ಟ್ರೆಂಡ್ ಆಗುತ್ತಿದೆ.

Join Whatsapp