ಪ್ರಧಾನಿ ಮೋದಿ ಭೇಟಿ ಹಿನ್ನೆಲೆ; ಸ್ತ್ರೀ ಶಕ್ತಿ ಸದಸ್ಯೆಯರು ಭಾಗವಹಿಸಬೇಕೆಂಬ ಜಿಲ್ಲಾಧಿಕಾರಿ ಆದೇಶ ಅಸಾಂವಿಧಾನಿಕ: WIM

Prasthutha|

ಮಂಗಳೂರು: ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವ ಕಾರಣದಿಂದ ಸ್ತ್ರೀ ಶಕ್ತಿ ಸದಸ್ಯೆಯರು ಕಡ್ಡಾಯವಾಗಿ ಭಾಗವಹಿಸಬೇಕೆಂಬ ದ.ಕ  ಜಿಲ್ಲಾಧಿಕಾರಿ ಆದೇಶ ಅಸಾಂವಿಧಾನಿಕ ಮತ್ತು ಖಂಡನಾರ್ಹ ,ಈ ಕೂಡಲೇ ಆದೇಶ ಹಿಂಪಡೆಯಲು ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ ಆಗ್ರಹಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಒಂದು ವೇಳೆ ಸರ್ಕಾರಿ ಕಾರ್ಯಕ್ರಮವಾಗಿದ್ದರೆ ಒಪ್ಪಬಹುದಿತ್ತು,ಆದರೆ ಒಂದು ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಸ್ತ್ರೀ ಸಂಘದ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಆದೇಶ ನೀಡಿರುವುದು ಅಸಾಂವಿಧಾನಿಕ ನಡೆಯಾಗಿದೆ ಹಾಗೂ ಜಿಲ್ಲಾಧಿಕಾರಿಗಳು ಯಾರ ಒತ್ತಡದಿಂದ ಈ ಆದೇಶ ನೀಡಿದ್ದಾರೆ ಎಂಬುದು ಪ್ರಸ್ತುತ ಸನ್ನಿವೇಶಗಳನ್ನು ಅವಲೋಕಿಸುವಾಗ ಮನದಟ್ಟಾಗುತ್ತದೆ. ಅದೇ ರೀತಿ ಆ ದಿನ ಮಂಗಳೂರು ನಗರದ ಶಾಲೆಗಳಿಗೆ ರಜೆ ನೀಡುವ ಔಚಿತ್ಯವಾದರು ಏನು ಎಂದು ಪ್ರಶ್ನಿಸಿದ್ದಾರೆ.

ಗಣೇಶೋತ್ಸವ ವಿಸರ್ಜನೆಯಿಂದ ನಗರದಲ್ಲಿ ಮೆರವಣಿಗೆ ಇರುವುದರಿಂದ ಜನಸಂದಣಿಯ ನೆಪ ನೀಡಿ ರಜೆ ನೀಡುವುದಾದರೆ ಜಿಲ್ಲೆಯ ಉಳಿದ ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಯಾಕೆ ರಜೆ ನೀಡಿಲ್ಲ. ಇದು ಬಿಜೆಪಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಸೇರಿಸುವ ಸಲುವಾಗಿಯೇ ಬಿಜೆಪಿ ಸಂಸದರು ಮತ್ತು ಜನಪ್ರತಿನಿಧಿಗಳ ಒತ್ತಡದಿಂದ ಈ ರೀತಿಯ ಆದೇಶವನ್ನು ನೀಡಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಾಗಿ ಜಿಲ್ಲಾಧಿಕಾರಿಗಳು ತಮ್ಮ ಎರಡು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.



Join Whatsapp