‘ಪನೌತಿ’ | ವಿಶ್ವಕಪ್ ಸೋಲಿಗೆ ಪ್ರಧಾನಿ ಮೋದಿ ಉಪಸ್ಥಿತಿಯೇ ಕಾರಣ: ರಾಹುಲ್ ಗಾಂಧಿ

Prasthutha|

ಜೈಪುರ: ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಹೃದಯ ವಿದ್ರಾವಕ ಸೋಲಿಗೆ ಪ್ರಧಾನಿ ನರೇಂದ್ರ ಮೋದಿಯ ಉಪಸ್ಥಿತಿಯೇ ಕಾರಣ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -


ರಾಜಸ್ಥಾನದ ಜಲೋರ್ ನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ಹಾಜರಿದ್ದ ಕಾರಣ ಅಹಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತಿದೆ ಎಂದರು.


ರಾಹುಲ್ ಗಾಂಧಿ ಭಾಷಣದ ಸಮಯದಲ್ಲಿ, ಗುಂಪಿನಲ್ಲಿ ಯಾರೋ “ಪನೌತಿ” ಎಂದು ಕೂಗಿದರು, ಇದರರ್ಥ ದುರದೃಷ್ಟಕರ ಅಥವಾ ಕೆಟ್ಟ ಶಕುನ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, (“ಹಾ… ಪನೌತಿ, ಪನೌತಿ … ಅಚಾ ಭಲಾ ವಹಾ ಪೆ ಹುಮಾರೆ ಲಡ್ಕೆ ವಿಶ್ವಕಪ್ ಜೀತ್ ಜಾತೆ, ವಹಾ ಪೆ ಪನೌತಿ ಹರ್ವಾ ದಿಯಾ. ಟಿವಿ ವಾಲೆ ಯೇ ನಹೀ ಕಹೆಂಗೆ ಮಗರ್ ಜಂತ ಜಾಂತಿ ಹೈ) ನಮ್ಮ ಹುಡುಗರು ಸುಲಭವಾಗಿ ವಿಶ್ವಕಪ್ ಗೆಲ್ಲಲಿದ್ದರು ಆದರೆ ‘ಕೆಟ್ಟ ಶಕುನ’ ನಮ್ಮನ್ನು ಸೋಲುವಂತೆ ಮಾಡಿತು. ಮಾಧ್ಯಮಗಳು ಇದನ್ನು ಎತ್ತಿ ತೋರಿಸುವುದಿಲ್ಲ ಆದರೆ ಜನರಿಗೆ ತಿಳಿದಿದೆ ಎಂದರು.

- Advertisement -


ಅವರು ನೇರವಾಗಿ ಅವರ ಹೆಸರನ್ನು ಹೇಳದಿದ್ದರೂ, ಅಹಮದಾಬಾದ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪ್ರಧಾನಿ ಮೋದಿ ವೈಯಕ್ತಿಕವಾಗಿ ಭಾಗವಹಿಸಿದ್ದರು ಎಂಬ ಅಂಶವನ್ನು ರಾಹುಲ್ ಉಲ್ಲೇಖಿಸಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.




Join Whatsapp