ಪ್ರಧಾನಿ ಮೋದಿಯ ಕಡಿಮೆ ಶಿಕ್ಷಣವು ದೇಶಕ್ಕೇ ಮಾರಕ: ಮನೀಶ್ ಸಿಸೋಡಿಯಾ ಪತ್ರ

Prasthutha|

ನವದೆಹಲಿ: ದಿಲ್ಲಿಯ ಶಿಕ್ಷಣ ಸಚಿವರಾಗಿದ್ದು, ಸದ್ಯ ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರು ದೇಶದ ಜನರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.
ಪ್ರಧಾನಿ ಮೋದಿಯವರ ಕಡಿಮೆ ಶಿಕ್ಷಣವು ದೇಶಕ್ಕೇ ಮಾರಕ ಎಂದು ಅದರಲ್ಲಿ ಬರೆದಿದ್ದಾರೆ.

- Advertisement -


ಆ ಕಾಗದವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಟ್ವೀಟ್ ಮಾಡಿದ್ದಾರೆ.


“ಇಂದಿನ ಯುವಕರು ಮಹತ್ವಾಕಾಂಕ್ಷೆ ಉಳ್ಳವರು, ಏನನ್ನಾದರೂ ಸಾಧಿಸಬೇಕು ಎನ್ನುವವರು. ಅದಕ್ಕೆ ಅವರಿಗೆ ಅವಕಾಶ ಬೇಕು. ಜಗತ್ತನ್ನು ಸೆಳೆಯುವ ಸಾಧನೆ ಮಾಡುವ ಆಸೆ ಅವರದು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದ್ಭುತ ಸಾಧಿಸಬೇಕೆಂಬ ಬಯಕೆ ಅವರದು. ಕಡಿಮೆ ಕಲಿತಿರುವ ಪ್ರಧಾನಿಯೊಬ್ಬರು ಮಹತ್ವಾಕಾಂಕ್ಷಿ ಯುವಕರ ಸಾಮರ್ಥ್ಯವನ್ನು ಭರಿಸಬಲ್ಲರೆ?” ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ ಮತ್ತು ಕಳೆದ ಕೆಲವೇ ವರ್ಷಗಳಲ್ಲಿ 60,000 ಶಾಲೆಗಳು ಮುಚ್ಚಿ ಹೋಗಿರುವುದನ್ನು ಸೂಚಿಸಿದ್ದಾರೆ.

- Advertisement -


ಭಾರತದ ಅಭಿವೃದ್ಧಿಗೆ ಉತ್ತಮ ಶಿಕ್ಷಣ ಪಡೆದ ಒಬ್ಬ ಪ್ರಧಾನಿಯ ಅಗತ್ಯವಿದೆ ಎನ್ನುತ್ತಾರೆ ಸಿಸೋಡಿಯಾ.
ಸದ್ಯ ಮೂಲೆಗೊತ್ತರಿಸಿರುವ 2021- 22ರ ದಿಲ್ಲಿಯ ಹೊಸ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಫೆಬ್ರವರಿ 26ರಂದು ಸಿಬಿಐ ಮನೀಶ್ ಸಿಸೋಡಿಯಾರನ್ನು ಬಂಧಿಸಿದೆ.



Join Whatsapp