ಬೇಗವಾನ್: 2 ದಿನಗಳ ಬ್ರೂನಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಐತಿಹಾಸಿಕ ಸುಲ್ತಾನ್ ಉಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದ್ದಾರೆ.
ಅವರು ಮಸೀದಿಯಲ್ಲಿ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ. ಪ್ರಸ್ತುತ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರ ತಂದೆಯ ಹೆಸರಿನಲ್ಲಿ ಈ ಮಸೀದಿಯನ್ನು 1958ರಲ್ಲಿ ನಿರ್ಮಿಸಲಾಯಿತು. ಸುಲ್ತಾನ್ ಸೈಫುದ್ದೀನ್ ಅವರನ್ನು ಆಧುನಿಕ ಬ್ರೂನಿಯ ಶಿಲ್ಪಿ ಎಂದು ಪರಿಗಣಿಸಲಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರಕಾರ, ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿರುವ ಭಾರತದ ಎರಡನೇ ನಾಯಕ ಪ್ರಧಾನಿ ನರೇಂದ್ರ ಮೋದಿ ಎನ್ನುವುದು ಮತ್ತೊಂದು ವಿಶೇಷ ಎಂದು ಹೇಳಿದ್ದಾರೆ.
ಸುಮಾರು 15 ನಿಮಿಷಗಳ ಕಾಲ ಮಸೀದಿಯಲ್ಲಿ ತಂಗಿದ್ದ ಮೋದಿ ಆ ಮಸೀದಿಯೊಳಗೆ ಓಡಾಡಿ, ಮಸೀದಿ ನಿರ್ಮಾಣದ ವಿಡಿಯೋ ವೀಕ್ಷಿಸಿದರು. ನಂತರ ಇಮಾಮ್ ಅವರೊಂದಿಗೆ ಸಂತಸ ಹಂಚಿಕೊಂಡರು. ಸುಲ್ತಾನ್ ಉಮರ್ ಅಲಿ ಸೈಫುದ್ದೀನ್ ಮಸೀದಿಯು ಆಗ್ನೇಯ ಏಷ್ಯಾದ ಅತ್ಯಂತ ಸುಂದರವಾದ ಮಸೀದಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಈ ಮಸೀದಿಯ ನಿರ್ಮಾಣವು ಸುಮಾರು 5 ವರ್ಷಗಳ ಕಾಲ ನಡೆಯಿತು.
#WATCH | Prime Minister Narendra Modi visits Omar Ali Saifuddien Mosque in Bandar Seri Begawan, Brunei.
— ANI (@ANI) September 3, 2024
(Video: DD) pic.twitter.com/Ek31ALCh6p
PM @narendramodi visited the Sultan Omar Ali Saifuddien Mosque where he was received by Brunei’s Minister of Religious Affairs Pehin Dato Ustaz Haji Awang Badaruddin. pic.twitter.com/ogtNRWtMgk
— Randhir Jaiswal (@MEAIndia) September 3, 2024
A very special welcome in Brunei Darussalam! Grateful for the affection. pic.twitter.com/ndDT41mMga
— Narendra Modi (@narendramodi) September 3, 2024