ಹುಲಿ ಕಾಣಿಸದಿದ್ದಕ್ಕೆ ಅಸಮಾಧಾನಗೊಂಡ ಮೋದಿ; ಸಫಾರಿ ಚಾಲಕನ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರ ಒತ್ತಾಯ

Prasthutha|

ಬೆಂಗಳೂರು: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಧಾನಿ ಮೋದಿ ಅವರು 22 ಕಿಲೋಮೀಟರ್ ಸಫಾರಿ ನಡೆಸಿದರೂ ಒಂದೇ ಒಂದು ಹುಲಿ ಕೂಡ ಕಣ್ಣಿಗೆ ಬೀಳದಿರುವುದಕ್ಕೆ, ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ಎಸ್ ಪಿ ಜಿಯನ್ನು ಗದರಿಸಿದ್ದಾರೆ ಎಂದು ವರದಿಯಾಗಿದೆ.

- Advertisement -


ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಲಿಗಳೇ ಕಾಣದಿರುವುದಕ್ಕೆ ಚಾಲಕ 29 ವರ್ಷದ ಮಧುಸೂಧನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಆತನ ವಾಹನದ ನೋಂದಣಿ ರದ್ದುಪಡಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಬಿಜೆಪಿಯ ಕೆಲವು ಮುಖಂಡರು ಒತ್ತಡ ಹೇರುತ್ತಿದ್ದಾರೆ. ಆದರೆ ಪ್ರಧಾನಿ ಮತ್ತು ಅರಣ್ಯ ಅಧಿಕಾರಿಗಳು ಭದ್ರತಾ ತಂಡಗಳನ್ನು ದೂಷಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.


ಹುಲಿಗಳು ಕಾಣಿಸಿಕೊಳ್ಳುವ ಕಡೆಗೆ ಸಫಾರಿ ಮಾರ್ಗವನ್ನು ಆಯ್ಕೆ ಮಾಡಲಾಗಿದೆ ಆದರೆ ಮೋದಿ ಹೋದಾಗ ಕಾಣಲಿಲ್ಲ. ಭದ್ರತೆ ವಿಚಾರವಾಗಿ ಆ ಮಾರ್ಗದಲ್ಲಿ ಹೆಚ್ಚು ವಾಹನಗಳು ಓಡಾಡಿದ್ದರಿಂದ ಹುಲಿಗಳು ಕಾಣಿಸಿಕೊಂಡಿಲ್ಲ ಎಂದು ಅವರಿಗೆ ವಿವರಿಸಿದ್ದೇವೆ. ಚಾಲಕ ಮಾರ್ಗವನ್ನು ಬದಲಾಯಿಸಬಹುದಿತ್ತು, ಆದರೆ ಅದು ಮಾಡಲಿಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.

Join Whatsapp