ನೇತಾಜಿಯ 28 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ

Prasthutha|

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಇಂಡಿಯಾ ಗೇಟ್ ನಲ್ಲಿ ಅನಾವರಣಗೊಳಿಸಿದ್ದಾರೆ.

- Advertisement -

ಈ ಪ್ರತಿಮೆಯು ಕೇಂದ್ರದ  13,450 ಕೋಟಿಗಳ ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯು ಹೊಸ ಸಂಸತ್ ಕಟ್ಟಡ, ಹೊಸ ಕಚೇರಿ ಮತ್ತು ಪ್ರಧಾನಿ ಮತ್ತು ಉಪರಾಷ್ಟ್ರಪತಿ ಮತ್ತು ಹೊಸ ಸಚಿವಾಲಯದ ಕಟ್ಟಡಗಳನ್ನು ಹೊಂದಿರುತ್ತದೆ. ರಾಷ್ಟ್ರಪತಿ ಭವನದ ಪಕ್ಕದಲ್ಲಿರುವ ಸಚಿವಾಲಯದ ಕಟ್ಟಡಗಳಾದ ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳನ್ನು ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸಲಾಗುವುದಾಗಿ ತಿಳಿದು ಬಂದಿದೆ.

ನೇತಾಜಿಯವರ ಕಪ್ಪು ಗ್ರಾನೈಟ್ ಪ್ರತಿಮೆಯನ್ನು 280 ಮೆಟ್ರಿಕ್ ಟನ್ ತೂಕದ ಗ್ರಾನೈಟ್ ನ ಏಕಶಿಲಾ ಬ್ಲಾಕ್ ನಿಂದ ಕೆತ್ತಲಾಗಿದೆ. ಪ್ರತಿಮೆಗಾಗಿ ಆರಿಸಲಾದ ಗ್ರಾನೈಟ್ ತುಂಡನ್ನು ತೆಲಂಗಾಣದಿಂದ ದೆಹಲಿಗೆ ಸಾಗಿಸಲಾಗಿದ್ದು, ಪ್ರತಿಮೆಯನ್ನು ಎರಡು ತಿಂಗಳಲ್ಲಿ ಕೆತ್ತಲಾಗಿದೆ

Join Whatsapp