ಏಪ್ರಿಲ್ 28, 29 ರಂದು ಪ್ರಧಾನಿ ಮೋದಿ ಉತ್ತರ ಕರ್ನಾಟಕಕ್ಕೆ ಆಗಮನ

Prasthutha|

ಬೆಳಗಾವಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಎಪ್ರಿಲ್ 28 ಹಾಗೂ 29 ರಂದು ಆರು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ಕ್ಯಾಂಪೇನ್ ಮಾಡಲಿದ್ದಾರೆ.

- Advertisement -

ಎಪ್ರಿಲ್ 28 ರಂದು ದಾವಣಗೆರೆ, ಕಾರವಾರ, ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಅಂದು ಪ್ರಧಾನಿ ಮೋದಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ವಿಟಿಯು ಗೆಸ್ಟ್ ಹೌಸ್, ಐಟಿಸಿ ವೆಲ್ ಕಮ್, ಮೇರಿಯಟ್, ಯುಕೆ-27 ಯಾವುದಾರು ಒಂದು ಹೊಟೇಲ್ ನಲ್ಲಿ ತಂಗಲಿದ್ದಾರೆ.

ಎಸ್ ಪಿಜಿ ಪರಿಶೀಲನೆ ಬಳಿಕ ಹೊಟೇಲ್ ನಿಗದಿಯಾಗಲಿದೆ. ಎಪ್ರಿಲ್ 29 ರಂದು ವಿಜಯಪುರ, ಕೊಪ್ಪಳ ಹಾಗೂ ಕಲಬುರಗಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

Join Whatsapp