ಮೈಸೂರು: ಸೋಲುವ ಭಯದಿಂದಾಗಿ ಪ್ರಧಾನಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿರೋಧ ಪಕ್ಷಗಳು ನನ್ನನ್ನು ಸಮಾಧಿ ಮಾಡಲು ಮುಂದಾಗಿವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಇಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಮೋದಿ 10 ವರ್ಷ ಬಡವರ ಪರ ಕೆಲಸ ಮಾಡಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ದೇಶದ ಪ್ರಧಾನ ಮಂತ್ರಿಯನ್ನು ಸೋಲಿಸಬೇಕು ಎಂಬುದು ವಿರೋಧ ಪಕ್ಷಗಳ ಬಯಕೆಯಾಗಿದೆ. ಸೋಲುವ ಭಯದಿಂದಾಗಿ ಪ್ರಧಾನಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ಈ ಪ್ರಧಾನಿ ಸುಳ್ಳಿನ ಸರದಾರ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಬಣ್ಣ ದೇಶದ ಜನರ ಮುಂದೆ ಬಯಲಾಗಿದೆ. ಈ ಹತಾಶೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಅವರ ಭಾವನಾತ್ಮಕ ಮಾತುಗಳು ಜನರಿಗೆ ಗೊತ್ತಿವೆ. ಮೇಲಕ್ಕೆ ಏರಿದವರು ಕೆಳಗೆ ಇಳಿಯಲೇ ಬೇಕು’ ಎಂದರು