ಪುಲ್ವಾಮಾ ಲೋಪದ ಬಗ್ಗೆ ಧ್ವನಿ ಎತ್ತದಂತೆ ಪ್ರಧಾನಿ ಮೋದಿ ನನ್ನ ಬಾಯಿ ಮುಚ್ಚಿಸಿದರು: ಸತ್ಯ ಪಾಲ್ ಮಲಿಕ್

Prasthutha|

ನವದೆಹಲಿ: ಪ್ರಧಾನಿ ಮೋದಿ ಸರಕಾರದ ನಂಬಿಕೆಯವರಾಗಿ ಬಿಕ್ಕಟ್ಟಿನ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ನೇಮಕಗೊಂಡಿದ್ದ ಸತ್ಯ ಪಾಲ್ ಮಲಿಕ್, ಪುಲ್ವಾಮಾ ಹತ್ಯೆಯು ಕೇಂದ್ರದ ತಪ್ಪು ನಡೆಯಿಂದಲೇ ಆಗಿತ್ತು ಎಂದು ಹೇಳಿಕೆ ನೀಡಿದ್ದಾರೆ.

- Advertisement -


ಇತ್ತೀಚೆಗಿನ ಒಂದು ಸಂದರ್ಶನದಲ್ಲಿ ಪುಲ್ವಾಮಾ ದಾಳಿಯಲ್ಲಿನ ಲೋಪದ ಬಗ್ಗೆ ನಾನು ವಿವರಿಸಲು ಹೊರಟಾಗ ಪ್ರಧಾನಿಯವರು ನೀವೀಗ ಬಾಯಿ ಮುಚ್ಚಿಕೊಂಡಿರಿ ಎಂದು ಮಲಿಕ್ ಹೇಳಿದ್ದಾರೆ.
ಶುಕ್ರವಾರ ಸಂಜೆ ದ ವೈರ್ ನ್ಯೂಸ್ ನಲ್ಲಿ ಅಪ್ಲೋಡ್ ಆಗಿರುವ ಕರಣ್ ಥಾಪರ್ ನಡೆಸಿದ ಸಂದರ್ಶನದಲ್ಲಿ ಸತ್ಯ ಪಾಲ್ ಅವರು “ಮೋದಿಯವರು ಭ್ರಷ್ಟಾಚಾರ ವಿರೋಧಿ ಎನ್ನುವುದೆಲ್ಲ ಸುಳ್ಳು, ಅವರ ಭ್ರಷ್ಟಾಚಾರವನ್ನು ಕಟ್ಟುನಿಟ್ಟಾಗಿ ಏನೂ ವಿರೋಧಿಸುವುದಿಲ್ಲ” ಎಂದೂ ಹೇಳಿದ್ದಾರೆ.


ಸತ್ಯ ಪಾಲ್ ಅವರ ಈ ಸಂದರ್ಶನ ಪ್ರಸಾರವಾದ ಕೂಡಲೆ ಟೆಲಿಗ್ರಾಫ್ ಪ್ರಧಾನಿ ಮತ್ತು ಇತರ ಸಂಬಂಧಿತ ಮಂತ್ರಿಗಳ ಅಭಿಪ್ರಾಯಕ್ಕೆ ಪ್ರಯತ್ನಿಸಿತು. ಆದರೆ ಮಧ್ಯ ರಾತ್ರಿಯವರೆಗೂ (ಈಗಲೂ) ಪ್ರತಿಕ್ರಿಯೆ ಪಡೆಯುವುದು ಸಾಧ್ಯವಾಗಿಲ್ಲ.
ರಾಜಕೀಯದಲ್ಲಿ ಉರುಳುಗಲ್ಲಾಗಿ ಬಂದ ಸತ್ಯ ಪಾಲ್ ಅವರು ಪಶ್ಚಿಮ ಉತ್ತರ ಪ್ರದೇಶದಲ್ಲಿ ಲೋಕ ದಳದ ಮಾಜಿ ಪ್ರಧಾನಿ ದಿವಂಗತ ಚರಣ್ ಸಿಂಗ್ ಅವರ ನರಳಿನಲ್ಲಿ ಬೆಳೆದವರು. ಅನಂತರ ಜನತಾ ಮತ್ತು ಸಮಾಜವಾದಿಗಳ ನಡುವೆ ಓಡಾಡಿ ಬಿಜೆಪಿಯಲ್ಲಿ ಸೇರಿಕೊಂಡವರು. ನಾನು ಇನ್ನು ಮುಂದೆ ಯಾವುದೇ ರಾಜಕೀಯ ಪಕ್ಷವನ್ನು ಸೇರುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದರೆ 2024ರ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡುವುದಾಗಿ ಇತ್ತೀಚೆಗೆ ಸತ್ಯ ಪಾಲ್ ಹೇಳಿದ್ದರು.

- Advertisement -


ಮೋದಿಯವರ ಸರಕಾರವು ಸತ್ಯಪಾಲ್ ಮಲಿಕ್ ಅವರನ್ನು 2017ರಲ್ಲಿ ಬಿಹಾರದ ರಾಜ್ಯಪಾಲರಾಗಿ ನೇಮಿಸಿತು. 2018ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಿತು. 2019ರಲ್ಲಿ ಪುಲ್ವಾಮಾ ಗುಂಪು ಹತ್ಯೆ ನಡೆಯಿತು ಮತ್ತು 2019ರಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬಂತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡ ಬಿಜೆಪಿ ಸರಕಾರವು ಸತ್ಯ ಪಾಲ್ ರನ್ನೇ ಅಲ್ಲಿ ಆಳಲು ಉಳಿಸಿತು. ಜಮ್ಮು ಮತ್ತು ಕಾಶ್ಮೀರವನ್ನು ಒಡೆದು ಮೋದಿ ಸರಕಾರವು ಅವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದಾಗ ರಾಜ್ಯಪಾಲ ಹುದ್ದೆ ಉಳಿಯಲಿಲ್ಲ. ಸತ್ಯ ಪಾಲ್ ಅವರನ್ನು ಗೋವಾದ ರಾಜ ಭವನಕ್ಕೆ ಕಳುಹಿಸಲಾಯಿತು.
2019ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಬಾಂಬ್ ದಾಳಿಯಾಗಿ 40 ಜನ ಸಿಆರ್ ಪಿಎಫ್ ಸೈನಿಕರು ಹತರಾದರು. ಬಿಜೆಪಿ ಅದನ್ನು ಚುನಾವಣಾ ವಿಷಯ ಮಾಡಿಕೊಂಡು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂತು. “ಆ ಸಿಆರ್ ಪಿಎಫ್ ತಂಡವು ಕ್ರಮವಾಗಿ ವಿಮಾನದಲ್ಲಿ ಹೋಗಬೇಕೇ ಹೊರತು ರಸ್ತೆ ದಾರಿಯಲ್ಲಿ ಅಲ್ಲ. ಆದರೆ ಅವರು ಕೇಳಿದ ಐದು ವಿಮಾನ ಒದಗಿಸಲಿಲ್ಲ. ರಸ್ತೆ ಮೂಲಕ ಹೋದ ಅವರು ಬಾಂಬು ಸ್ಫೋಟಕ್ಕೆ ಸಿಲುಕಿ ಸಾವಿಗೀಡಾದರು.


ಆ ದಿನವನ್ನು ಸತ್ಯಪಾಲ್ ನೆನಪು ಮಾಡಿಕೊಂಡರು. ಫೆಬ್ರವರಿ 14, 2019ರಂದು ಪ್ರಧಾನಿ ನನ್ನನ್ನು ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದ ಹೊರಾವರಣಕ್ಕೆ ಕರೆಸಿಕೊಂಡರು.
“ಆ ಸಂಜೆ ನಾನು ಪ್ರಧಾನಿಯವರಿಗೆ ಇದು ನಮ್ಮಿಂದಾದ ತಪ್ಪು ಎಂದು ಹೇಳಿದೆ. ನಾವು ಕ್ರಮ ಪ್ರಕಾರ ವಿಮಾನ ಒದಗಿಸಿದ್ದರೆ ಈ ರೀತಿ ಸೈನಿಕರ ಅಂತ್ಯ ಆಗುತ್ತಿರಲಿಲ್ಲ. ಕೂಡಲೆ ಪ್ರಧಾನಿಯವರು ‘ನೀವೀಗ ಬಾಯಿ ಮುಚ್ಚಿಕೊಂಡಿರಬೇಕು’ ಎಂದರು. ನಾನು ಹೇಳಿದೆ ಈ ರೀತಿ ಈಗಾಗಲೇ ಕೆಲವು ಚಾನೆಲ್ ಗಳಲ್ಲಿ ಪ್ರಸಾರ ಆಗಿದೆ ಎಂದೆ. ಅದಕ್ಕೆ ಪ್ರಧಾನಿಯವರು “ಇದನ್ನೆಲ್ಲ ನೀವು ಮಾತನಾಡಬೇಡಿ. ಇದೆಲ್ಲ ನಾವು ಮಾತನಾಡಬೇಕಾದ ವಿಷಯ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ನನಗೆ ಇದನ್ನೇ ಹೇಳಿದರು. ಇದನ್ನೆಲ್ಲ ಮಾತನಾಡಬೇಡಿ. ಸುಮ್ಮನಿದ್ದುಬಿಡಿ ಎಂದರು. ಈಗ ಈ ಎಲ್ಲದರ ಆರೋಪ ಪಾಕಿಸ್ತಾನದ ಮೇಲೆ ಬೀಳಬೇಕಾದರೆ ನಾವು ಮೌನವಾಗಿದ್ದು ಬಿಡಬೇಕು ಎಂದರು” ಎಂದು ಸತ್ಯ ಪಾಲ್ ಹೇಳಿದರು.
ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್ ಪಿಎಫ್ ಮುಖ್ಯರನ್ನು ದೂರಿದ ಅವರು ಸೈನಿಕರು ಹೊರಟ ರಸ್ತೆಯ ಯಾವುದೇ ಲಿಂಕ್ ರಸ್ತೆಗಳಲ್ಲಿ ತಡೆ ನಿಲ್ಲಿಸಿರಲಿಲ್ಲ ಎಂದರು.



Join Whatsapp