ಬಿಜೆಪಿಯಿಂದ ಮಾಜಿ ಪ್ರಧಾನಿ ನೆಹರೂ ದೂಷಣೆ: ಪ್ರಧಾನಿ ಮೋದಿಯಿಂದ ಸ್ಮರಣೆ

Prasthutha|

ನವದೆಹಲಿ: ರಾಷ್ಟ್ರ ಇಬ್ಬಾಗವಾಗಲು ಮಾಜಿ ಪ್ರಧಾನಿ ನೆಹರೂ ಅವರು ಕಾರಣವೆಂದು ಬಿಜೆಪಿ ಸದಾ ದೂರುತ್ತಿರುವ ಮಧ್ಯೆಯೇ ಕರ್ನಾಟದಲ್ಲಿ ಪ್ರಕಟವಾದ ಸ್ವಾತಂತ್ರ್ಯ ಕುರಿತ ಜಾಹೀರಾತಿನಲ್ಲಿ ಕಾಣೆಯಾಗಿದ್ದ ಮಾಜಿ ಪ್ರಧಾನಿ ನೆಹರೂ ಅವರನ್ನು ನರೇಂದ್ರ ಮೋದಿ ಅವರು ಇಂದು ತನ್ನ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸ್ಮರಿಸಿದ್ದಾರೆ.

- Advertisement -

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದರು.

ತನ್ನ ಭಾಷಣದ ವೇಳೆ ದೇಶದ ಸ್ವಾತಂತ್ರ್ಯಕ್ಕಾಗಿ ಮಹತ್ವದ ಕೊಡುಗೆ ನೀಡಿದ ಡಾ. ರಾಜೇಂದ್ರ ಪ್ರಸಾದ್, ಜವಾಹರಲಾಲ್ ನೆಹರೂ, ಸರ್ದಾರ್ ಪಟೇಲ್, ಶ್ಯಾಮ್ ಪ್ರಸಾದ್ ಮುಖರ್ಜಿ, ಲಾಲ್ ಬಹದ್ದೂರ್ ಶಾಸ್ತ್ರಿ, ದೀನದಯಾಳ್ ಉಪಾಧ್ಯಾಯ, ಜೈ ಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ, ವಿನೋಬಾ ಭಾವೆ, ನಾನಾಜಿ ದೇಶಮುಖ್, ಸುಬ್ರಮಣ್ಯಂ ಭಾರತಿ ಅವರ ಹೆಸರು ಹೇಳಿ ಅವರಿಗೆ ನಮಿಸಬೇಕಾಗಿದೆ ಎಂದು ತಿಳಿಸಿದರು.

- Advertisement -

ಇದೇ ವೇಳೆ ಕರ್ನಾಟಕದ ಬಿಜೆಪಿ ಸರ್ಕಾರ ಪತ್ರಿಕೆಗಳಿಗೆ ನೀಡಿದ್ದ ನೆಹರೂ ಅವರ ಚಿತ್ರವನ್ನು ಕೈಬಿಡಲಾಗಿತ್ತು.

Join Whatsapp