ಫೆಲೆಸ್ತೀನ್‌ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ಮೋದಿ:ಗಾಝಾ ಪರಿಸ್ಥಿತಿ ಬಗ್ಗೆ ಭಾರತ ಕಳವಳ

Prasthutha|

- Advertisement -

ಫೆಲೆಸ್ತೀನಿಯನ್ ಜನರಿಗೆ ಭಾರತದ ಬೆಂಬಲ ಸದಾ ಇರಲಿದೆ

ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್‌ನಲ್ಲಿ ಫೆಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಭೆ ನಡೆಸಿದರು.

- Advertisement -

ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿಯವರು ಕಳವಳ ವ್ಯಕ್ತಪಡಿಸಿದರು.

ಫೆಲೆಸ್ತೀನಿಯನ್ ಜನರಿಗೆ ಭಾರತದ ಬೆಂಬಲ ಇರಲಿದೆ ಎಂದು ತಿಳಿಸಿದರು.

ಇಸ್ರೇಲ್-ಫೆಲೆಸ್ತೀನ್ ಸಂಘರ್ಷ ಪರಿಹಾರಕ್ಕಾಗಿ ಭಾರತವು ದೀರ್ಘಕಾಲ ಪ್ರಯತ್ನಿಸಲಿದೆ. ಅ.7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮೊದಲ ಜಾಗತಿಕ ನಾಯಕರಲ್ಲಿ ಪಿಎಂ ಮೋದಿ ಒಬ್ಬರು. ಆದರೆ, ಗಾಝಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಪದೇ ಪದೇ ಕಳವಳ ವ್ಯಕ್ತಪಡಿಸಿದೆ.



Join Whatsapp