5ಜಿ ಸೇವೆಗೆ ಪ್ರಧಾನಿ ಮೋದಿ ಚಾಲನೆ; ಮಂಗಳೂರಿಗರು 2024ರವರೆಗೆ ಕಾಯಬೇಕು

Prasthutha|

ನವದೆಹಲಿ: 5ಜಿ ದೂರಸಂಪರ್ಕ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ.

- Advertisement -

ಆಯ್ದ ನಗರಗಳಲ್ಲಿ ಈ ಸೇವೆ ಸಿಗಲಿದ್ದು, ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ.

ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ.  ಏರ್ ಟೆಲ್ ಇಂದೇ 5ಜಿ ಸೇವೆ ಆರಂಭಿಸುತ್ತಿದೆ.

- Advertisement -

5ಜಿ ಸೇವೆಯು ಬಲೆ ನೆಲೆ ಹುಡುಕುವಲ್ಲಿ ಹೆಚ್ಚಿನ ವೇಗವನ್ನು ನೀಡುತ್ತದೆ. 4ಜಿಗಳ ವೇಗದ ಮೇಲೆ ಅದರಿಂದ ತೊಂದರೆಯೇನೂ ಇಲ್ಲ. ಆದರೆ 5ಜಿ ಪಡೆಯಲು ಬೇರೆಯದೇ ಮೊಬೈಲ್ ಕೊಳ್ಳಬೇಕು ಇದರಲ್ಲಿ ಉನ್ನತೀಕರಿಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

ಏರ್ ಟೆಲ್ ಇಂದಿನಿಂದ ದೇಶದ ಎಂಟು ನಗರಗಳಲ್ಲಿ 5ಜಿ ಆರಂಭಿಸುತ್ತಿದೆ. ಅದರಲ್ಲಿ ಬೆಂಗಳೂರು ಇದೆ; ಮಂಗಳೂರು ಇಲ್ಲ.

ಜಿಯೋ ಕೂಡ 5ಜಿಯನ್ನು ಆರಿಸಿದ ನಗರಗಳಲ್ಲಿ ಆರಂಭಿಸಲಿದ್ದು, 2023ರ ಅಂತ್ಯಕ್ಕೆ ಇಡೀ ದೇಶದಲ್ಲಿ 5ಜಿ ಸೇವೆ ಒದಗಿಸುವುದಾಗಿ ಹೇಳಿದೆ.

ಒಟ್ಟಾರೆ ಮೊದಲ ಹಂತದಲ್ಲಿ ದೇಶದ 13 ನಗರಗಳು ಮಾತ್ರ 5ಜಿಯಲ್ಲಿ ಬರುತ್ತಿದ್ದು ಅದರಲ್ಲಿ ಕೂಡ ಮಂಗಳೂರು ಇಲ್ಲ. ಇಡೀ ದೇಶಕ್ಕೆ 5ಜಿ ಸೇವೆ ಒದಗಿಸಲು 2024 ಬರಬೇಕು ಎಂದು ಏರ್ ಟೆಲ್ ಹೇಳಿದೆ.

ಮುಖ್ಯವಾಗಿ ಕ್ಲೌಡ್ ಗೇಮಿಂಗ್, ಅಂತರಜಾಲ ಸೇವೆ, ಸುದ್ದಿಗೆ ವೇಗ ಎಆರ್/ವಿಆರ್ ತಂತ್ರಜ್ಞಾನಗಳು 5ಜಿಯಲ್ಲಿ ಹೆಚ್ಚಿನ ಒಳಿತು ಕಾಣಲಿವೆ ಎಂದು ತಿಳಿದು ಬಂದಿದೆ. 




Join Whatsapp