ಪ್ರಧಾನಿ ಮೋದಿ ನಿಜವಾದ ಹಿಂದೂ ಅಲ್ಲ, ತಾಯಿ ಮೃತಪಟ್ಟಾಗ ತಲೆ ಬೋಳಿಸಿಕೊಂಡಿಲ್ಲ: ಲಾಲು ಯಾದವ್

Prasthutha|

ನವದೆಹಲಿ: ತಾಯಿ ಹೀರಾಬೆನ್ 2022ರಲ್ಲಿ ನಿಧನರಾದಾಗ ಪ್ರಧಾನಿ ಮೋದಿ ತಲೆ ಬೋಳಿಸಿಕೊಂಡಿಲ್ಲ, ಹೀಗಾಗಿ ಮೋದಿ ನಿಜವಾದ ಹಿಂದೂ ಅಲ್ಲ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕಾಪ್ರಹಾರ ನಡೆಸಿದ್ದಾರೆ.

- Advertisement -


ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ‘ಜನ ವಿಶ್ವಾಸ್ ಮಹಾ ರ್‍ಯಾಲಿ’ಯನ್ನುದ್ದೇಶಿಸಿ ಮಾತನಾಡಿದ ಲಾಲು ಪ್ರಸಾದ್ ಯಾದವ್, ಹಿಂದೂ ಸಂಪ್ರದಾಯಗಳ ಪ್ರಕಾರ ಪೋಷಕರು ತೀರಿಕೊಂಡಾಗ ಗಂಡುಮಕ್ಕಳು ಕೇಶಮುಂಡನ ಮಾಡಿಸಿಕೊಳ್ಳಬೇಕು ಎಂದರು.


ಸ್ವಜನ ಪಕ್ಷಪಾತ ಕುರಿತು ಹೇಳಿಕೆಗಾಗಿಯೂ ಮೋದಿ ವಿರುದ್ಧ ದಾಳಿ ನಡೆಸಿದ ಯಾದವ್, ಹೆಚ್ಚು ಮಕ್ಕಳನ್ನು ಹೊಂದಿರುವ ಜನರು ಈ ವಿಷಯದಲ್ಲಿ ಅವಹೇಳನಕ್ಕೆ ಗುರಿಯಾಗುತ್ತಾರೆ. ಮೋದಿಯವರಿಗೆ ಸ್ವಂತ ಕುಟುಂಬವಿಲ್ಲ ಎಂದು ಹೇಳಿದರು.

- Advertisement -


ರ್‍ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

Join Whatsapp