ಗಗನಯಾತ್ರಿಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ

Prasthutha|

ತಿರುವನಂತಪುರಂ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಐತಿಹಾಸಿಕ ಮಾನವ ಸಹಿತ ಗಗನಯಾನದ ಭಾಗವಾಗಿ ಕಡಿಮೆ ಭೂಮಿಯ ಕಕ್ಷೆಗೆ ಹಾರುವ ನಾಲ್ಕು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ.

- Advertisement -

ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.
ಕ್ಯಾಪ್ಟನ್ ಪಿ. ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್. ಶುಕ್ಲಾ ಅವರು ಕಕ್ಷೆಗೆ ಹಾರಲಿರುವ ಗಗನಯಾನಿಗಳಾಗಿದ್ದಾರೆ. ಇವರಿಗೆ ರೆಕ್ಕೆಗಳನ್ನು ನೀಡುವ ಮೂಲಕ ಮೋದಿ ಶುಭ ಕೋರಿದ್ದಾರೆ.

ಈ ನಾಲ್ವರು ಇಸ್ರೋದ ಗಗನಯಾನ ಯೋಜನೆಯಲ್ಲಿ ಬಾಹ್ಯಾಕಾಶಕ್ಕೆ ಹೋಗಲಿರುವ ಮೊದಲ ಬ್ಯಾಚ್​ನವರು. ಐದು ವರ್ಷದ ಹಿಂದೆಯೇ ಇವರನ್ನು ಆಯ್ಕೆ ಮಾಡಲಾಗಿತ್ತು. ಸದ್ಯಕ್ಕೆ ಇವರಿಗೆ ಬೆಂಗಳೂರಿನಲ್ಲಿ ವಿವಿಧ ತರಬೇತಿ ನೀಡಲಾಗುತ್ತಿದೆ. ಈ ನಾಲ್ವರಲ್ಲಿ ಮೂವರು ಮಾತ್ರವೇ ಬಾಹ್ಯಾಕಾಶಕ್ಕೆ ಹೋಗಲಿರುವುದು. ಇವರ ಪೈಕಿ ಪ್ರಶಾಂತ್ ನಾಯರ್ ಕೇರಳ ಪಾಲಕ್ಕಾಡ್​ನವರು.. ಅಜಿತ್ ಕೃಷ್ಣನ್ ಕೂಡ ಕೇರಳದವರೆನ್ನಲಾಗಿದೆ.

- Advertisement -


‘ಗಗನಯಾತ್ರಿಗಳನ್ನು ಭೇಟಿ ಮಾಡಲು ಮತ್ತು ಅವರನ್ನು ದೇಶದ ಮುಂದೆ ಪರಿಚಯಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ನಾನು ಅವರನ್ನು ಇಡೀ ದೇಶದ ಪರವಾಗಿ ಅಭಿನಂದಿಸಲು ಬಯಸುತ್ತೇನೆ. ನೀವು (ಗಗನಯಾತ್ರಿಗಳು) ದೇಶದ ಹೆಮ್ಮೆ’ ಎಂದು ಮೋದಿ ಹೇಳಿದ್ದಾರೆ.



Join Whatsapp