ಗುಲಾಮ್ ನಬಿ ಆಝಾದ್ ಅವರ ವಿದಾಯ ಸಮಾರಂಭದಲ್ಲಿ ಕಣ್ಣೀರಿಟ್ಟ ಮೋದಿ

Prasthutha|

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದ ಗುಲಾಮ್ ನಬಿ ಆಝಾದ್ ಅವರ ವಿದಾಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಗುಲಾಮ್ ನಬಿ ಸೇರಿದಂತೆ ಈ ತಿಂಗಳು ನಿವೃತ್ತರಾಗುವ ಸದಸ್ಯರ ವಿದಾಯ ಸಮಾರಂಭದಲ್ಲಿ ಪ್ರಧಾನಿ ಮಾತನಾಡುತ್ತಿದ್ದರು. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಝಾದ್ ಅವರ ಆತ್ಮೀಯತೆ ಮತ್ತು ಅವರ ಸೇವೆಗಳನ್ನು ವಿವರಿಸುತ್ತಿದ್ದಂತೆ ಮೋದಿ ಕಣ್ಣೀರಿಟ್ಟಿದ್ದಾರೆ.

- Advertisement -

ಮೋದಿಯವರು ಆಗಾಗ್ಗೆ ಪದಗಳನ್ನು ಮೊಟಕುಗೊಳಿಸಿ ನಿಮಿಷಗಳ ಕಾಲ ಪದಗಳು ಸಿಗದೆ ತನ್ನನ್ನು ತಾನು ನಿಯಂತ್ರಿಸಲು ಹೆಣಗಾಡಿದ್ದಾರೆ.  ಆಝಾದ್ ಅವರಿಗೆ ಸೆಲ್ಯೂಟ್ ಹೊಡೆಯುವ ಮೂಲಕ ಮೋದಿ ಭಾಷಣ ಮುಗಿಸಿದ್ದಾರೆ.

ಪ್ರತಿಷ್ಠೆ ಬರುತ್ತದೆ, ಉನ್ನತ ಹುದ್ದೆಗಳು ಕೈಸೇರುತ್ತದೆ,  ಅಧಿಕಾರ ಒಲಿದು ಬರುತ್ತದೆ. ಇದನ್ನೆಲ್ಲಾ ಹೇಗೆ ನಿಭಾಯಿಸಬೇಕೆಂದು ಗುಲಾಮ್ ನಬಿ ಆಝಾದ್ ರಿಂದ ನಾವು ಕಲಿಯಬೇಕು. ನಾನು ಅವರನ್ನು ಓರ್ವ ಉತ್ತಮ ಸ್ನೇಹಿತ ಎಂದು ಪರಿಗಣಿಸುತ್ತೇನೆ. ಅವರನ್ನು ನಿವೃತ್ತಿ ಹೊಂದಲು ನಾವು ಅನುಮತಿಸುವುದಿಲ್ಲ. ಅವರಿಂದ ಸಲಹೆ ಪಡೆಯುವುದನ್ನು ಮುಂದುವರಿಸುತ್ತೇವೆ. ನನ್ನ ಬಾಗಿಲುಗಳು ಯಾವಾಗಲೂ ನಿಮಗೆ ತೆರೆದಿರುತ್ತವೆ

- Advertisement -

ನರೇಂದ್ರ ಮೋದಿ

ರಾಜ್ಯಸಭೆಯಲ್ಲಿ ಮುಂದಿನ ಪ್ರತಿಪಕ್ಷದ ನಾಯಕರಾಗಿ ಬರುವವರು ಗುಲಾಮ್ ನಬಿ ಆಜಾದ್ ಮಾಡಿದ ಸೇವೆ  ಮಾಡಲು ತುಂಬಾ ಕಷ್ಟವಾಗಬಹುದು. ಏಕೆಂದರೆ ಗುಲಾಮ್ ನಬಿ ಆಝಾದ್ ಅವರು ತಮ್ಮ ಪಕ್ಷಕ್ಕಾಗಿ ಮಾತ್ರ ಕೆಲಸ ಮಾಡಿದವರಲ್ಲ. ಅವರು ಯಾವಾಗಲೂ ಈ ದೇಶಕ್ಕಾಗಿ ಕೆಲಸ ಮಾಡಿದವರು”ಎಂದು ಮೋದಿ ಹೇಳಿದ್ದಾರೆ.

Join Whatsapp