► ರಾಹುಲ್ ಧರಿಸಿದ್ದರೆ ದೇಶದ್ರೋಹಿ ಆಗುತ್ತಿದ್ದರು ಎಂದ ಕಾಂಗ್ರೆಸ್
ನವದೆಹಲಿ: ದೀಪಾವಳಿಯಂದು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನಕ್ಕೆ ಶೂ ಧರಿಸಿ ಪ್ರವೇಶಿಸಿರುವ ವಿಡೀಯೋವನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಮೋದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮೋದಿ ದೇವಾಲಯ ಆವರಣದಲ್ಲಿ ಶೂ ಧರಿಸಿ ನಡೆಯುತ್ತಿರುವ ವೀಡಿಯೊ ಹಂಚಿಕೊಂಡು, ಮೋದಿ ದೇವಾಲಯದಲ್ಲಿ ಶೂ ಧರಿಸಿ ನಮಸ್ಕರಿಸುತ್ತಿದ್ದಾರೆ ಎಂದರೆ ಅದೂ ಸಂಪ್ರದಾಯವಾಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಒಂದು ವೇಳೆ ರಾಹುಲ್ ಗಾಂಧಿ ಈ ಕೃತ್ಯ ಎಸಗಿದ್ದರೆ ದೇಶಾದ್ಯಂತ ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಲಾಗುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾತಾಣದಲ್ಲಿ ಟೀಕಿಸಿದ್ದಾರೆ. ದೇವಸ್ಥಾನಕ್ಕೆ ಶೂ ಧರಿಸಿ ಪ್ರವೇಶಿಸುವುದು ಮೋದಿಯ ಸಂಪ್ರದಾಯವಾಗಿರಬಹುದು ಎಂದು ವ್ಯಂಗ್ಯವಾಡಿದ್ದು, ಇಷ್ಟೆಲ್ಲಾ ಶೋ ಆಫ್ ಬೇಕಿತ್ತಾ ಎನ್ನುತ್ತಾ ಮೋದಿ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ್ದಾರೆ.
ನವೆಂಬರ್ 5ರಂದು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಪ್ರಾರ್ಥನೆ ನಡೆಸಿ 12 ಅಡಿಗಳಷ್ಟು ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಿದ್ದರು.