ಬಿಹಾರಕ್ಕೆ ವಿಶೇಷ ಸ್ಥಾನಮಾನ ನಿರಾಕರಿಸಿದ ಮೋದಿ; ಎಲ್ಲಾ ವಿಷಯಗಳನ್ನು ನಿಧಾನವಾಗಿ ಅರಿತುಕೊಳ್ಳುವಿರಿ: ನಿತೀಶ್ ಕುಮಾರ್ ತಿರುಗೇಟು

Prasthutha|

ದೆಹಲಿ: ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆ ನಿರಾಕರಿಸಿದ ನರೇಂದ್ರ ಮೋದಿ ಸರ್ಕಾರದ ನಿರ್ಧಾರ ಬಗ್ಗೆ ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

- Advertisement -


ಬಿಹಾರ ಅಸೆಂಬ್ಲಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರ್, “ನೀವು ಎಲ್ಲಾ ವಿಷಯಗಳನ್ನು ನಿಧಾನವಾಗಿ ಅರಿತುಕೊಳ್ಳುವಿರಿ (ಸಬ್ ಕುಛ್ ಧೀರೇ ಧೀರೇ ಜಾನ್ ಜಾಯೇಂಗೇ) ಎಂದು ಹೇಳಿದ್ದಾರೆ.

ತಾವು ಹೇಳಲಿರುವ ಮಾತುಗಳನ್ನು ನೇರಾನೇರವಾಗಿ ಹೇಳದೆ ಬೇರೆಯೇ ಅರ್ಥ ಬರುವಂತೆ ಮಾತನಾಡಿದ ನಂತರ ಸುದ್ದಿಗಾರರತ್ತ ಮುಗುಳ್ನಗೆ ಬೀರಿ ಕೈ ಬೀಸಿ ನಿತೀಶ್ ಕುಮಾರ್ ಸದನದತ್ತ ನಡೆದರು.

- Advertisement -


2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲು ವಿಫಲವಾಗಿದ್ದು, ಸರ್ಕಾರವನ್ನು ರಚಿಸಲು ತನ್ನ ಮಿತ್ರಪಕ್ಷಗಳ ಮೇಲೆ ಹೆಚ್ಚು ಅವಲಂಬಿತವಾಯಿತು. ಬಿಜೆಪಿಯ ಸಂಖ್ಯೆ 240, ಆದರೆ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬೆಂಬಲದ ನಂತರ 272 ಸ್ಥಾನಗಳೊಂದಿಗೆ ಸರ್ಕಾರ ರಚಿಸಲು ಸಾಧ್ಯವಾಯಿತು.
ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ಕೂಡಲೇ ಎನ್ ಡಿಎ ಮಿತ್ರ ಪಕ್ಷ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿತು, ಅಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಹೊಸ ಬೇಡಿಕೆಯನ್ನು ಎತ್ತುವ ನಿರ್ಣಯವನ್ನು ಅಂಗೀಕರಿಸಲಾಯಿತು.



Join Whatsapp