ಶ್ರೀಮಂತರು, ಬಡವರಿಗೆ ಪ್ರತ್ಯೇಕ ಭಾರತ ಸೃಷ್ಟಿ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತ ಮತ್ತು ಬಡವರಿಗಾಗಿ ಪ್ರತ್ಯೇಕ ಎರಡು ಭಾರತವನ್ನು ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ದೇಶದ ಸಂಪನ್ಮೂಲಗಳನ್ನು ಕೆಲವೇ ಶ್ರೀಮಂತರಿಗೆ ಒಪ್ಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಬುಡಕಟ್ಟು ಜಿಲ್ಲೆಯಾದ ದಹೋದ್ ಎಂಬಲ್ಲಿ ನಡೆದ ‘ಆದಿವಾಸಿ ಸತ್ಯಾಗ್ರಹ ಜಾಥಾ’ ದಲ್ಲಿ ಈ ಗುಜರಾತ್ ಅಸೆಂಬ್ಲಿ ಚುನಾವಣೆಗೆ ತಮ್ಮ ಪಕ್ಷದ ಪರ ಪ್ರಚಾರವನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

2014 ರಲ್ಲಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರು. ಅದಕ್ಕೂ ಮುನ್ನ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ನಲ್ಲಿ ಆರಂಭಿಸಿದ ಕೆಲಸವನ್ನು ಅವರು ದೇಶದಲ್ಲಿ ಮಾಡುತ್ತಿದ್ದಾರೆ. ಇದನ್ನು ಗುಜರಾತ್ ಮಾದರಿಯಾಗಿ ಬಿಂಬಿಸುತ್ತಿರುವುದಾಗಿ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಎರಡು ಭಾರತ ನಿರ್ಮಾಣವಾಗುತ್ತಿದ್ದು, ಒಂದು ಶ್ರೀಮಂತರ ಭಾರತದಲ್ಲಿ ಕೆಲವು ಆಯ್ದ ಜನರು, ಅಧಿಕಾರ ಮತ್ತು ಹಣ ಹೊಂದಿರುವ ಬಿಲಿಯನೇರ್ ಗಳು ಮತ್ತು ಅಧಿಕಾರಿ ಮಾತ್ರ ಇರುತ್ತಾರೆ. ಎರಡನೇ ಭಾರತ ಸಾಮಾನ್ಯ ಜನರದ್ದು ಎಂದು ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್ ಪಕ್ಷಕ್ಕೆ ಎರಡು ಭಾರತ ಬೇಕಾಗಿಲ್ಲ ಎಂದ ಅವರು, “ಬಿಜೆಪಿ ಮಾದರಿಯಲ್ಲಿ, ಬುಡಕಟ್ಟು ಮತ್ತು ಇತರ ಬಡವರಿಗೆ ಸೇರಿರುವ ನೀರು, ಅರಣ್ಯ ಮತ್ತು ಭೂಮಿಯಂತಹ ಜನರ ಸಂಪನ್ಮೂಲಗಳನ್ನು ಕೆಲವರಿಗೆ ನೀಡಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಆದಿವಾಸಿಗಳ ಹಕ್ಕುಗಳನ್ನು ಕಸಿದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಿಜೆಪಿ ಸರ್ಕಾರ ನಿಮಗೆ ಏನನ್ನೂ ನೀಡುವುದಿಲ್ಲ, ಆದರೆ ನಿಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ನೀವು (ಆದಿವಾಸಿಗಳು) ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಬೇಕು ಮತ್ತು ಆಗ ಮಾತ್ರ ಅದು ನಿಮ್ಮದಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Join Whatsapp