ಐಪಿಎಲ್ 2022 | ಫೈನಲ್ ಪಂದ್ಯ ವೀಕ್ಷಿಸಲಿರುವ ಪ್ರಧಾನಿ ಮೋದಿ

Prasthutha|

ಐಪಿಎಲ್‌ನ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್‌ ಮೈದಾನ ಸರ್ವ ರೀತಿಯಲ್ಲೂ ಸಜ್ಜಾಗಿದೆ. ಚೊಚ್ಚಲ ಆವೃತ್ತಿಯಲ್ಲೇ ಫೈನಲ್ ಪ್ರವೇಶಿಸಿರುವ ಗುಜರಾತ್ ಟೈಟನ್ಸ್ ಮತ್ತು 14 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.

- Advertisement -

ಈ ಹೈ ವೋಲ್ಟೇಜ್ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಗೃಹ ಸಚಿವ ಅಮಿತ್ ಶಾ ಹಾಗೂ ಹಾಲಿವುಡ್, ಬಾಲಿವುಡ್‌ನ ಪ್ರಮುಖ ತಾರೆಯರ ಜೊತೆ ಕುಳಿತು ವೀಕ್ಷಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಪಂದ್ಯ ನಡೆಯುವ ಮೈದಾನದ ಸುತ್ತ ಭಾರೀ ಭದ್ರತೆ ಒದಗಿಸಲಾಗಿದೆ. ಅಹಮದಾಬಾದ್ ನಗರದಲ್ಲಿ 6,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 

17 ಡಿಸಿಪಿ, 4 ಡಿಐಜಿ, 28 ಎಸಿಪಿ, 51 ಪೊಲೀಸ್ ಇನ್ಸ್‌ಪೆಕ್ಟರ್‌, 268 ಸಬ್ ಇನ್ಸ್‌ಪೆಕ್ಟರ್‌ ಹಾಗೂ 5,000ಕ್ಕೂ ಹೆಚ್ಚು ಕಾನ್ಸ್‌ಸ್ಟೇಬಲ್‌, 1,000 ಗೃಹ ರಕ್ಷಕ ದಳ ಸಿಬ್ಬಂದಿ ಜೊತೆಗೆ ಎಸ್ಆರ್‌ಪಿಯ ಮೂರು ಕಂಪನಿಗಳು ಬಂದೋಬಸ್‌ನ ಭಾಗವಾಗಲಿವೆ ಎಂದು, ಅಹಮದಾಬಾದ್ ನಗರ ಪೊಲೀಸ್ ಆಯುಕ್ತ ಸಂಜಯ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. 

- Advertisement -

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಮೇ 28ರಂದು ಹಲವು ಸಚಿವರ ಜೊತೆ ಗುಜರಾತ್‌ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ಧಾರೆ. ಭಾನುವಾರ ನಡೆಯುವ ಐಪಿಎಲ್ 2022ರ ಫೈನಲ್ ವೇಳೆ ಇವರ ಜೊತೆ ಹಲವು ಗಣ್ಯಾತಿ ಗಣ್ಯರು ಮತ್ತು ಹಾಲಿವುಡ್, ಬಾಲಿವುಡ್ ಸೂಪರ್‌ಸ್ಟಾರ್‌ಗಳು ಮೈದಾನದಲ್ಲಿ ಉಪಸ್ಥಿತರಿರುವರು.

ಮೆಗಾ ಫೈನಲ್ ಪಂದ್ಯಕ್ಕೂ ಮುನ್ನ  ಅದ್ಧೂರಿ ಸಮಾರೋಪ ಸಮಾರಂಭ ಜರುಗಲಿದೆ. ಸಂಗೀತ ಮಾಂತ್ರಿಕ ಎ.ಆರ್.ರಹ್ಮಾನ್ ಮತ್ತು ಬಾಲಿವುಡ್ ನಟ ರಣಬೀರ್ ಕಪೂರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. 1 ಲಕ್ಷದ 20 ಸಾವಿರ ಪ್ರೇಕ್ಷಕರು ಫೈನಲ್ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಆಗಮಿಸುವ ನಿರೀಕ್ಷೆಯಿದೆ. 

Join Whatsapp